ಕರ್ನಾಟಕ

karnataka

ETV Bharat / state

ಕಾರವಾರ: ಟೋಲ್​ ಗೇಟ್​ನಲ್ಲಿ‌ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹ - ಟೋಲ್​ ಗೇಟ್​ನಲ್ಲಿ‌ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಂಕ ವಸೂಲಾತಿಗೆ ತೆರೆಯಲಾದ ಟೋಲ್​ ಗೇಟ್​ನಲ್ಲಿ‌ ನೂರಕ್ಕೆ ನೂರಷ್ಟು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಕೋಲಾ ತಾಲ್ಲೂಕಿನ‌ ಬೆಲೆಕೇರಿ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

karvara protest
ಟೋಲ್​ ಗೇಟ್​ನಲ್ಲಿ‌ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

By

Published : Dec 16, 2019, 7:46 PM IST

ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸುಂಕ ವಸೂಲಾತಿಗೆ ತೆರೆಯಲಾದ ಟೋಲ್​ ಗೇಟ್​ನಲ್ಲಿ‌ ನೂರಕ್ಕೆ ನೂರಷ್ಟು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಅಂಕೋಲಾ ತಾಲೂಕಿನ‌ ಬೆಲೆಕೇರಿ ಟೋಲ್ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

ಟೋಲ್​ ಗೇಟ್​ನಲ್ಲಿ‌ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಬೇಲೆಕೇರಿ ಕ್ರಾಸ್‌ನಲ್ಲಿ ಸೇರಿದ ಕಾರ್ಯಕರ್ತರು ಐಆರ್​ಬಿ ಕಂಪನಿಯಿಂದ ಈಗಾಗಲೇ ಟೋಲ್ ಗೇಟ್ ನಿರ್ಮಾಣವಾಗಿದೆ. ಸದ್ಯದಲ್ಲಿಯೇ ಟೋಲ್ ಕಾರ್ಯರಂಭವಾಗಲಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸಲು ಸಾಕಷ್ಟು ಉದ್ಯೋಗಿಗಳ ಅವಶ್ಯಕತೆ ಇದೆ. ಆದ್ದರಿಂದ ಸರ್ಕಾರದ ನೌಕಾನೆಲೆ, ಕೊಂಕಣ ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ- 66 ಹೀಗೆ ಹಲವು ಯೋಜನೆಗಳಿಂದ ನಿರ್ಗತಿಕರಾದ ಸ್ಥಳಿಯರಿಗೆ ಮೊದಲು ಆದ್ಯತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸ್ಥಳೀಯವಾಗಿ ಸಾಕಷ್ಟು ನಿರುದ್ಯೋಗಿಗಳಿದ್ದು, ಯೋಜನೆಗಾಗಿ ಮನೆ ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂತಹವರಿಗೆ ಇಲ್ಲಿನ ಎಲ್ಲ ಉದ್ಯೋಗಗಳನ್ನು ನೀಡಬೇಕು ಎಂದು ಐಆರ್​ಬಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು . ಒಂದೊಮ್ಮೆ ಉತ್ತರ ಕನ್ನಡ ಜಿಲ್ಲೆಯವರನ್ನು ಹೊರತುಪಡಿಸಿ ಅನ್ಯರಿಗೆ ನೀಡಿದರೇ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details