ಕಾರವಾರ: ಸಮುದ್ರದ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ.
ಕಾರವಾರ: ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ಮೂವರ ರಕ್ಷಣೆ - ಮೂವರು ಪ್ರವಾಸಿಗರ ರಕ್ಷಣೆ
ಸಮುದ್ರದ ಪಾಲಾಗುತಿದ್ದ ಒಂದೇ ಕುಟುಂಬದ ಮೂವರು ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ನಡೆದಿದೆ. ಸಂಜನ, ಸಂಜಯ್ ಹಾಗೂ ಕಮಲಮ್ಮ ರಕ್ಷಣೆಗೊಳಗಾದವರು.
ಒಂದೇ ಕುಟುಂಬದ ಮೂವರು ಪ್ರವಾಸಿಗರ ರಕ್ಷಣೆ
ಸಂಜನ, ಸಂಜಯ್ ಹಾಗೂ ಕಮಲಮ್ಮ ರಕ್ಷಣೆಗೊಳಗಾದವರು. ಬೆಂಗಳೂರಿನ ಕತ್ರಿಗುಪ್ಪೆಯಿಂದ ಮುರುಡೇಶ್ವರಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ಐವರು ನೀರಿಗಿಳಿದಿದ್ದರು. ಸಮುದ್ರದಲ್ಲಿ ಈಜಾಡುವಾಗ ಅಲೆಗೆ ಸಿಲುಕಿ ಸಂಜನ, ಸಂಜಯ್ ಹಾಗೂ ಕಮಲಮ್ಮ ಎಂಬುವರು ಕೊಚ್ಚಿ ಹೋಗಿದ್ದರು. ತಕ್ಷಣ ಅಲ್ಲಿಯೇ ಇದ್ದವರು ಕೂಗಿಕೊಂಡಾಗ ಸ್ಥಳೀಯರಾದ ಸಂಜೀವ್ ಹರಿಕಾಂತ್ ಹಾಗೂ ಚಂದ್ರಶೇಖರ್ ದೇವಾಡಿಗ ಎಂಬುವರು ಮೂವರನ್ನು ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.