ಭಟ್ಕಳ: ಮಳೆಯ ಅಬ್ಬರದಲ್ಲೂ ಮೀನುಗಾರಿಕೆಗೆ ತೆರಳಿ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಪಾತಿದೋಣಿಗಳನ್ನು ಗಿಲ್ನೆಟ್ ದೋಣಿ ಮೂಲಕ ರಕ್ಷಣೆ ಮಾಡಿದ ಘಟನೆ ನೆಸ್ತಾರ ಸಮುದ್ರ ತೀರದಲ್ಲಿ ನಡೆದಿದೆ.
ಭಟ್ಕಳ: ಸಮುದ್ರದಲ್ಲಿ ಸಿಲುಕಿದ್ದ ಮೀನುಗಾರರ ರಕ್ಷಣೆ - ನೆಸ್ತಾರ ಮೀನುಗಾರರ ರಕ್ಷಣೆ
ರವಿವಾರ ಬೆಳಿಗ್ಗೆ ಸುಮುದ್ರ ಅಲೆಗಳ ಉಬ್ಬರ ಕಡಿಮೆಯಾಗಿತ್ತು. ಇದರಿಂದ ಮುಂಡಳ್ಳಿ, ಬೆಳ್ನಿ, ಬಂದರು ಭಾಗದ ಮೀನುಗಾರರು ಸುಮಾರು ಹತ್ತಕ್ಕೂ ಅಧಿಕ ಪಾತಿದೋಣಿಗಳೊಂದಿಗೆ ಮೀನುಗಾರಿಕೆಗೆ ತೆರಳಿದ್ದರು.
ಮೀನುಗಾರರ ರಕ್ಷಣೆ
ಶನಿವಾರ ರಾತ್ರಿಯಿಂದ ತಾಲೂಕಿನಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ರವಿವಾರ ಬೆಳಿಗ್ಗೆ ಸುಮುದ್ರ ಅಲೆಗಳ ಉಬ್ಬರ ಕಡಿಮೆಯಾಗಿತ್ತು. ಇದರಿಂದ ಮುಂಡಳ್ಳಿ, ಬೆಳ್ನಿ, ಬಂದರು ಭಾಗದ ಮೀನುಗಾರರು ಸುಮಾರು ಹತ್ತಕ್ಕೂ ಅಧಿಕ ಪಾತಿದೋಣಿಗಳೊಂದಿಗೆ ಮೀನುಗಾರಿಕೆಗೆ ತೆರಳಿದ್ದರು.
ಮೀನುಗಾರಿಕೆ ಮುಗಿಸಿ ಮರಳಿ ಬರುವ ವೇಳೆ ಮಳೆಯ ಆರ್ಭಟದ ಜೊತೆ ಅಲೆಗಳ ಉಬ್ಬರ ಹೆಚ್ಚಾಗಿತ್ತು. ಇದರಿಂದ ಮರಳಿ ಬರಲಾಗದೆ ತೊಂದರೆಗೆ ಸಿಲುಕಿದ್ದರು. ಇದನ್ನು ಗಮನಿಸಿದ ಕೇಲವು ಮೀನುಗಾರರನ್ನು ಗಿಲ್ನೆಟ್ ದೋಣಿ ಮೂಲಕ ಅಪಾಯಕ್ಕೆ ಸಿಲುಕಿದ ಮೀನುಗಾರರ ರಕ್ಷಣೆ ಮಾಡಿ ಸುರಕ್ಷಿತವಾಗಿ ದಡಕ್ಕೆ ಕರೆತರಲಾಗಿದೆ.