ಶಿರಸಿ: ಬರಗಾಲದಲ್ಲಿ ಮನೆ ಮಗನಿಗೆ ಹಸಿವು ಜಾಸ್ತಿ ಎನ್ನುವ ಗಾದೆ ಮಾತಿನಂತೆ ಕೊರೊನಾ ನಡುವೆ ಶಿರಸಿ ನಗರಸಭೆ ಆಸ್ತಿ ತೆರಿಗೆ ಹೆಚ್ಚು ಮಾಡಿದೆ.
ಬರಗಾಲದಲ್ಲಿ ಮನೆಮಗನಿಗೆ ಹಸಿವು ಜಾಸ್ತಿ... ಕೊರೊನಾ ನಡುವೆ ಶಿರಸಿ ನಗರಸಭೆಯಿಂದ ಆಸ್ತಿ ತೆರಿಗೆ ಹೆಚ್ಚಳ - ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಸಭೆ ಕೊರೊನಾ ಸಮಸ್ಯೆ ನಡುವೆಯೂ ಆಸ್ತಿ ತೆರಿಗೆ ಹೆಚ್ಚು ಮಾಡಿದೆ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
![ಬರಗಾಲದಲ್ಲಿ ಮನೆಮಗನಿಗೆ ಹಸಿವು ಜಾಸ್ತಿ... ಕೊರೊನಾ ನಡುವೆ ಶಿರಸಿ ನಗರಸಭೆಯಿಂದ ಆಸ್ತಿ ತೆರಿಗೆ ಹೆಚ್ಚಳ dwsdd](https://etvbharatimages.akamaized.net/etvbharat/prod-images/768-512-6904259-thumbnail-3x2-vish.jpg)
ಪ್ರತಿ ಮೂರು ವರ್ಷಗಳಿಗೊಮ್ಮೆ ಸ್ಥಳೀಯ ಆಡಳಿತ ಸಂಸ್ಥೆಗಳ ತೆರಿಗೆಯನ್ನು ಹೆಚ್ಚಳ ಮಾಡಬಹುದು ಎಂಬ ನಿಯಮ ಚಾಲ್ತಿಯಲ್ಲಿದೆ. ಈ ನಿಯಮದಂತೆ ಸದ್ಯದ ಸಮಸ್ಯೆಯನ್ನು ಪರಿಗಣಿಸದೇ ಶೇ.20 ರಿಂದ 30 ರಷ್ಟು ತೆರಿಗೆಯನ್ನು ಮೂರು ವರ್ಷಗಳಿಗೆ ಹೆಚ್ಚಿಸಿದೆ.
ಸರ್ಕಾರದ ಸುತ್ತೋಲೆಯ ಪ್ರಕಾರ ಶಿರಸಿ ನಗರಸಭೆ ಆಸ್ತಿ ತೆರಿಗೆ ಹೆಚ್ಚಳ ಮಾಡಿ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾರ್ವಜನಿಕರ ಜೀವನ ಕೊರೊನಾ ಪ್ರಕೋಪಕ್ಕೆ ತತ್ತರಿಸಿ ಹೋಗಿದೆ. ಆರ್ಥಿಕ ಸ್ಥಿತಿಗತಿಗಳು ಸಹ ದುರ್ಬವಾಗಿರುವ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವ ವ್ಯವಸ್ಥೆ ಜಾರಿಯಾಗಬೇಕಾಗಿದೆ. ತಕ್ಷಣ ಈ ಆಸ್ತಿ ತೆರಿಗೆ ಕ್ರಮವನ್ನು ಕೈ ಬಿಡಬೇಕು ಎಂದು ನಗರಸಭೆ ಸದಸ್ಯರೂ ಸಹ ಒತ್ತಾಯಿಸಿದ್ದಾರೆ.