ಕರ್ನಾಟಕ

karnataka

ETV Bharat / state

ಕೈ ವಿರೋಧದ ನಡುವೆಯೂ ಜೆಡಿಎಸ್​ಗೆ ಟಿಕೆಟ್​... ಉ.ಕನ್ನಡ ಕ್ಷೇತ್ರದಲ್ಲಿ ಬಿಜೆಪಿಗೆ ಲಾಭ? - jds

ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಆರ್​ವಿಡಿ ಮಾತಿಗೂ ಬೆಲೆ ಕೊಡದೆ ಜೆಡಿಎಸ್​ ಟಿಕೆಟ್ ಹಂಚಿಕೆ ಮಾಡಿರೋದು ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತಂದಿದೆ ಎಂಬ ಮಾತು ಕೇಳಿ ಬಂದಿದೆ.

ಪ್ರಚಾರ

By

Published : Mar 15, 2019, 9:16 AM IST

ಶಿರಸಿ :ಕಾಂಗ್ರೆಸ್ ನಾಯಕರ ಪ್ರಬಲ ವಿರೋಧದ ನಡುವೆಯೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಗೆ ಟಿಕೆಟ್ ಫೈನಲ್ ಮಾಡಿದ್ದು, ಕಾಂಗ್ರೆಸ್​ನಲ್ಲಿ ಭಿನ್ನರಾಗ ಮೂಡಿದೆ.

ಹೌದು... ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಇದೀಗ ಬಿಜೆಪಿಗಿಂತ ಕಾಂಗ್ರೆಸ್‍ಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಜಿಲ್ಲೆಯ ಯಾವೊಂದೂ ಕಡೆ ಅಧಿಕಾರದಲ್ಲಿಲ್ಲದ ಜೆಡಿಎಸ್ ಹಠಕ್ಕೆ ಬಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್‍ನ ಆರ್.ವಿ.ದೇಶಪಾಂಡೆ ವಿರೋಧದ ನಡುವೆಯೂ ಲೋಕಸಭಾ ಟಿಕೆಟ್ ತನ್ನ ಮಡಿಲಿಗೆ ಹಾಕಿಕೊಂಡಿದ್ದು ಕಾಂಗ್ರೆಸ್ಸಿಗರಿಗೆ ಮುಖಭಂಗ ಆದಂತಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಜೆಡಿಎಸ್‍ಗೆ ದೋಸ್ತಿ ಪಕ್ಷವಾದ ಕಾಂಗ್ರೆಸ್ ಮುಳುಗು ನೀರಾಗುವ ಸಾಧ್ಯತೆ ತೆರೆದಿಟ್ಟಿದೆ.

JDS party

ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್‍ಗೆ ಟಿಕೆಟ್ ನೀಡದೇ ಕಾಂಗ್ರೆಸ್‍ಗೆ ಆದ್ಯತೆ ನೀಡಬೇಕೆಂದು ಸಭೆ ನಡೆಸಿ ಒತ್ತಾಯ ಕೂಡ ಮಾಡಿದ್ರು. ಇದಕ್ಕೂ ದೋಸ್ತಿ ಸರ್ಕಾರದಲ್ಲಿ ಬೆಲೆ ನೀಡದ ಕಾರಣ ಇದೀಗ ಕಾಂಗ್ರೆಸ್ಸಿಗರು ಜೆಡಿಎಸ್ ಪರ ಚುನಾವಣಾ ಪ್ರಚಾರ ಕಾರ್ಯದಿಂದಲೇ ದೂರ ಉಳಿಯಲುಮುಂದಾಗಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಇಮೇಜ್ ಇಲ್ಲದ ಪಕ್ಷದ ಪರ ಪ್ರಚಾರ ಕಾರ್ಯ ಮಾಡಿದ್ರೆ ಕಾಂಗ್ರೆಸ್ ಇಮೇಜ್ ಹಾಳಾಗುತ್ತೆ. ಅದೂ ಅಲ್ಲದೆ ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಆರ್​ವಿಡಿ ಮಾತಿಗೂ ಬೆಲೆ ಕೊಡದೆ ಟಿಕೆಟ್ ಹಂಚಿಕೆ ಮಾಡಿರೋದು ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಹೀಗಾಗಿ ಜಿಲ್ಲೆಯ ಮಟ್ಟಿಗೆ ಬಿಜೆಪಿ ಸೋಲಿಗಿಂತ ಜೆಡಿಎಸ್ ಸೋಲು ಮುಖ್ಯ ಅಂತಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.

ಹಠಕ್ಕೆ ಬಿದ್ದು ಟಿಕೆಟ್ ಪಡೆದ ಸಂಭ್ರಮದಲ್ಲಿರುವ ಜೆಡಿಎಸ್ ಇನ್ನೂ ಪ್ರಚಾರ ಕಾರ್ಯ ಆರಂಭಿಸಿಲ್ಲ. ಬಿಜೆಪಿ ಅದಾಗ್ಲೇ ಪ್ರಚಾರ ಕಾರ್ಯದಲ್ಲಿ ತೊಡಗಿ ತಿಂಗಳು ಕಳೆದಿದೆ. ಬೂತ್ ಮಟ್ಟದಲ್ಲಿಯೂ ಹಾಲೀ ಸಂಸದ ಅನಂತಕುಮಾರ ಹೆಗಡೆ ಪ್ರಚಾರ ಮಾಡುತ್ತಿದ್ದಾರೆ. ಈಗಾಗಲೇ ಇಡೀ ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಇಷ್ಟು ವೇಗ ಪಡೆದಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಜೆಡಿಎಸ್‍ಗೆ ಕಾಂಗ್ರೆಸ್ ಸಹಾಯ ಅನಿವಾರ್ಯ. ದುರದೃಷ್ಟಕರ ಸಂಗತಿ ಏನೆಂದ್ರೆ ಜೆಡಿಎಸ್ ಮೇಲೆ ಕಾಂಗ್ರೆಸ್ ಮುನಿಸಿಕೊಂಡಿದೆ. ಇದು ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ವರವಾದ್ರೆ ಜೆಡಿಎಸ್ ಪಾಲಿಗೆ ಶಾಪವಾಗುವ ಎಲ್ಲ ಲಕ್ಷಣಗಳೂ ಗೋಚರವಾಗ್ತಿದೆ.

ABOUT THE AUTHOR

...view details