ಕಾರವಾರ: ನಿಷೇಧಿತ ಲೈಟ್ ಫಿಶಿಂಗ್ ನಡೆಸುತ್ತಿದ್ದ ಗೋವಾ ಮೂಲದ ಎರಡು ಬೋಟುಗಳನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ನಡೆದಿದೆ.
ಗೋವಾ ಮೂಲದ ಮೆಕ್ಸಿ ಗ್ರೇಸ್-1 ಹಾಗೂ ಮೆರೀ ಗ್ರೇಸ್-2 ಹೆಸರಿನ ಎರಡು ಯಾಂತ್ರಿಕೃತ ಬೋಟ್ಗಳು ನಿಷೇಧಿತ ಅಕ್ರಮ ಲೈಟ್ ಮೀನುಗಾರಿಕೆಯಲ್ಲಿ ತೊಡಗಿದ್ದವು. ಈ ಬಗ್ಗೆ ಸ್ಥಳೀಯ ಮೀನುಗಾರರು ಇಂಡಿಯನ್ ಕೋಸ್ಟ್ ಗಾರ್ಡ್ನವರಿಗೆ ಮಾಹಿತಿ ನೀಡಿದ್ದರು.