ಭಟ್ಕಳ: ವಿಶ್ವಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹೋದರ ಸೋಮು ಬಾಯಿ ಮೋದಿ ಭೇಟಿ ನೀಡಿ ದೇವರ ದರ್ಶನ ಪಡೆದರು.
ವಿಶ್ವಪ್ರಸಿದ್ಧ ಮುರುಡೇಶ್ವರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಸಹೋದರ - ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ
ಪ್ರಧಾನಿ ನರೇಂದ್ರ ಮೋದಿ ಸಹೋದರ ಸೋಮು ಬಾಯಿ ಮೋದಿ ಅವರು ಮುರುಡೇಶ್ವರಕ್ಕೆ ಭೇಟಿ ನೀಡಿದ್ದಾರೆ. ಈ ಭೇಟಿ ವಿಚಾರವನ್ನು ಯಾರಿಗೂ ತಿಳಿಸಿಲ್ಲವಾದ್ದರಿಂದ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ನರೇಂದ್ರ ಮೋದಿ ಸಹೋದರ
ಮಂಗಳವಾರ ಮಧ್ಯಾಹ್ನ 3 ಘಂಟೆಯ ವೇಳೆಗೆ ಮುರುಡೇಶ್ವರಕ್ಕೆ ಭೇಟಿ ನೀಡಿ ಶಿವನ ದರ್ಶನ ಪಡೆದುಕೊಂಡಿದ್ದಾರೆ. ನಂತರ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಅವರನ್ನು ಸನ್ಮಾನಿಸಲಾಗಿದೆ.
ಇವರು ತಮ್ಮ ಪ್ರವಾಸದ ವಿಷಯವನ್ನು ಯಾರಿಗೂ ತಿಳಿಸದೆ ಬಂದಿದ್ದಾರೆ. ಇವರ ಭೇಟಿಗೂ ಅರ್ಧ ಗಂಟೆ ಮೊದಲು ದೇವಸ್ಥಾನ ಆಡಳಿತ ಮಂಡಳಿಗೆ ಮೋದಿ ಸಹೋದರ ಭೇಟಿ ನೀಡುವ ವಿಷಯ ತಿಳಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಭೇಟಿ ವಿಷಯ ಅರಿತ ಮುರುಡೇಶ್ವರ ಠಾಣೆ ಪೊಲೀಸರು ಆ ವೇಳೆ ಭದ್ರತೆ ನೀಡಿದ್ದಾರೆ.
Last Updated : Nov 25, 2021, 6:47 AM IST