ಕರ್ನಾಟಕ

karnataka

ETV Bharat / state

ಪರಿಷತ್ ಗಲಾಟೆಗೆ ಪ್ರತಾಪ್ ಚಂದ್ರ ಶೆಟ್ಟಿಯೇ ಕಾರಣ: ಸಚಿವ ಹೆಬ್ಬಾರ್ ಆರೋಪ

ವಿಧಾನ ಪರಿಷತ್​​ನಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಕಾಂಗ್ರೆಸ್​ನವರು ತಮಗೆ ಬಹುಮತ ಇಲ್ಲ ಅಂತ ಗೊತ್ತಾದಾಗ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೋಗಬೇಕಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಕಿಡಿಕಾರಿದ್ದಾರೆ.

Minister Hebbar alleges
ಸಚಿವ ಹೆಬ್ಬಾರ್

By

Published : Dec 18, 2020, 9:49 PM IST

ಶಿರಸಿ:ಮೊನ್ನೆ ನಡೆದ ಘಟನೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯೇ ನೇರ ಕಾರಣ. ಅವರು ನನಗೆ ಮೆಜಾರಿಟಿ ಇಲ್ಲ ಅಂತ ಮೊದ್ಲೇ ರಾಜೀನಾಮೆ ನೀಡಿದ್ರೆ ಇಂತಹ ಘಟನೆ ನಡೆಯೋಕೆ ಸಾಧ್ಯವಿರಲಿಲ್ಲ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ನೇರವಾಗಿ ಆರೋಪಿಸಿದ್ದಾರೆ.

ಸಚಿವ ಶಿವರಾಮ್ ಹೆಬ್ಬಾರ್
ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಮ್ ಹೆಬ್ಬಾರ್, ವಿಧಾನ ಪರಿಷತ್​ನಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ. ಕಾಂಗ್ರೆಸ್​​ನವರು ತಮಗೆ ಬಹುಮತ ಇಲ್ಲಾ ಅಂತ ಗೊತ್ತಾದಾಗ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಮೊದಲನೇ ದಿನವೇ ಅವಿಶ್ವಾಸ ನಿರ್ಣಯ ಮಂಡಿಸಿದ್ವಿ. ಆದ್ರೆ ಟೆಕ್ನಿಕಲ್ ಕಾರಣಕ್ಕಾಗಿ 1 ದಿನ ಕಡಿಮೆಯಾಗಿತ್ತು. ಸ್ಪೀಕರ್ ಬಂದವರೇ ಯಾವ ಕಾರಣವೂ ಇಲ್ಲದೇ ಸದನವನ್ನ ದಿಢೀರ್ ಮುಂದೆ ಹಾಕಿದರು ಎಂದರು.

ಸಭಾಪತಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಇದ್ದಾಗ ಉಪಸಭಾಪತಿ ಸದನ ನಡೆಸೋದು ಸಂಪ್ರದಾಯ. ಆದ್ರೆ ಸಭಾಪತಿಯವರ ಅತಿಯಾದ ಅಧಿಕಾರದ ಲಾಲಸೆಯಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದರು.

For All Latest Updates

TAGGED:

ABOUT THE AUTHOR

...view details