ಕರ್ನಾಟಕ

karnataka

ETV Bharat / state

ಹಿಂದೂಗಳು ರಕ್ಷಣೆಗೆ ತಮ್ಮ ಮನೆಯಲ್ಲಿ ಶಸ್ತಾಸ್ತ್ರ ಇಟ್ಟುಕೊಳ್ಳಬೇಕು: ಪ್ರಮೋದ್ ಮುತಾಲಿಕ್

ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಹೋಗಬೇಕು. ಬಿಜೆಪಿಯನ್ನು ನಂಬಿ ಕೂತರೆ ಪ್ರಯೋಜನವಿಲ್ಲ. ಕಠಿಣ ಕ್ರಮ ಎಂಬ ಸರ್ಕಾರದ ಬೊಗಳೆ ನಂಬಲು ಜನರು ತಯಾರಿಲ್ಲ ಎಂದು ಪ್ರಮೋದ್​​ ಮುತಾಲಿಕ್ ಶಿರಸಿಯಲ್ಲಿ ಹೇಳಿದರು.

Pramod Muthalik
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್

By

Published : Aug 15, 2022, 7:52 PM IST

ಶಿರಸಿ:ಹಿಂದೂಗಳು ತಮ್ಮ ರಕ್ಷಣೆಗೆ ಮನೆಯಲ್ಲಿ‌ ತಲವಾರ್ ಇಟ್ಟುಕೊಳ್ಳಬೇಕು. ಕ್ಷತ್ರೀಯ ಗುಣ ಬೆಳೆಸಿಕೊಳ್ಳಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್ ಹೇಳಿದ್ದಾರೆ. ಶಿರಸಿ ನಗರದ ಅಂಜನಾದ್ರಿ ದೇವಸ್ಥಾನದಲ್ಲಿ ಭಾನುವಾರ ಜಾಗೃತ ನಾಗರಿಕರ ವೇದಿಕೆ ಮತ್ತು ಹಿಂದೂ ಜಾಗರಣ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​​ ಮುತಾಲಿಕ್

ಹಿಂದೂ ಸಂಘಟನೆಗಳು ಒಗ್ಗಟ್ಟಾಗಿ ಹೋಗಬೇಕು. ಬಿಜೆಪಿಯನ್ನು ನಂಬಿ ಕೂತರೆ ಪ್ರಯೋಜನವಿಲ್ಲ. ಕಠಿಣ ಕ್ರಮ ಎಂಬ ಸರ್ಕಾರದ ಬೊಗಳೆ ನಂಬಲು ಜನರು ತಯಾರಿಲ್ಲ. ಸಾಥ್ ಕೊಟ್ಟರೆ ಕೊಡಿ, ಇಲ್ಲ ಒದ್ದು ಮುನ್ನಡೆಯುತ್ತೇವೆ ಎಂದರು.

ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ನಾವು ದೇಶ ವಿಭಜನೆಯ ಕರಾಳತೆಯನ್ನೂ ನೆನಪಿಸಿಕೊಳ್ಳಬೇಕು. ಅಖಂಡ ಭಾರತದ ಸಿಂಧೂ ನದಿ ಭಾಗದ ಜನರು ಅನಾಥವಾದ ದಿನ ಇದಾಗಿತ್ತು. ಕೇಸರಿ ಬಣ್ಣದ ಧ್ವಜವನ್ನು ರಾಷ್ಟ್ರಧ್ವಜ ಎಂದು ಸಮಿತಿ ಪರಿಗಣಿಸಿತ್ತು‌. ಮಹಾತ್ಮ ಗಾಂಧಿ ಅದನ್ನು ವಿರೋಧಿಸಿದ ಕಾರಣ ತ್ರಿವರ್ಣ ಧ್ವಜ ಜಾರಿಗೆ ಬಂದಿದೆ. ಕೇಸರಿ ಆಗಿನ ಗಾಂಧೀಜಿಯವರಿಂದ ಹಿಡಿದು ಈಗಿನ ಸಿದ್ದರಾಮಯ್ಯವರೆಗೆ ಅಪಥ್ಯ ಆಗಿದೆ ಎಂದು ಟೀಕಿಸಿದರು.

ಇದನ್ನೂ ಓದಿ:140ಕ್ಕೂ ಹೆಚ್ಚು ಸ್ಥಾನ ಪಡೆದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರ್ತೇವೆ: ಯಡಿಯೂರಪ್ಪ

ದೇಶಕ್ಕೆ ಸ್ವಾತಂತ್ರ್ಯ ಬಂದರೂ ಹಿಂದೂ ಸಮಾಜಕ್ಕಾಗಿ ಹೋರಾಡುವ ನನ್ನಂತಹ ವ್ಯಕ್ತಿಗೆ ರಾಜ್ಯದ 21 ಜಿಲ್ಲೆಗಳಲ್ಲಿ ನಿರ್ಬಂಧ ಹೇರಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ನೆರೆಯ ಗೋವಾಕ್ಕೆ ವಿದೇಶಿಗರು ಬರುತ್ತಾರೆ. ಎಂಟು ವರ್ಷದಿಂದ ನನಗೆ ಪ್ರವೇಶ ನೀಡುತ್ತಿಲ್ಲ. ಕಾಂಗ್ರೆಸ್ ನಾಯಕರು ತುಷ್ಟೀಕರಣದ ಸಲುವಾಗಿ ದೇಶದ್ರೋಹಿಗಳಿಗೂ ದೇಶಭಕ್ತರ ಪಟ್ಟ ಕಟ್ಟಿದ್ದಾರೆ. ಈ ಕಾರಣಕ್ಕಾಗಿಯೇ ಟಿಪ್ಪುನಂತಹ ಹಿಂದೂ ವಿರೋಧಿಯನ್ನು ಕಾಂಗ್ರೆಸ್ ನಾಯಕರು ಮೆರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details