ಶಿರಸಿ: ಅಪ್ರಾಪ್ತ ವಯಸ್ಕ ಬಾಲಕಿಯ ಜೊತೆಗೆ ನಿರಂತರ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭವತಿ ಮಾಡಿದ ಕಾಮುಕನ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿರುವ ಘಟನೆ ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿರಸಿ: ಅಪ್ರಾಪ್ತ ಬಾಲಕಿಯನ್ನು ಗರ್ಭಿಣಿ ಮಾಡಿದ ಆರೋಪಿ ಅಂದರ್ - ಶಿರಸಿ 16 ವರ್ಷದ ಬಾಲಕಿ ಜೊತೆ ದೈಹಿಕ ಸಂಪರ್ಕ ಸುದ್ದಿ
16 ವರ್ಷದ ಬಾಲಕಿಯ ಜೊತೆಗೆ ನಿರಂತರ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿಯ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿ ಅಂದರ್
ಶಿರಸಿ ತಾಲೂಕಿನ ಮಳಲಗಾಂವಿನ ಮಂಜುನಾಥ ನಾಗರಾಜ ಮೊಗೇರ (25) ಉಂಡಾಡಿಕಟ್ಟೆ ಬಂಧಿತ ಆರೋಪಿ. 16 ವರ್ಷದ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿದ್ದು, ಆಕೆಯ ಪಾಲಕರು ಇವನ ವಿರುದ್ಧ ದೂರು ನೀಡಿದ್ದಾರೆ.
ಡಿ.ಎಸ್.ಪಿ. ಗೋಪಾಲಕೃಷ್ಣ ನಾಯಕ ಹಾಗೂ ಸಿ.ಪಿ.ಐ. ಪ್ರದೀಪ ಬಿ.ಯು ಅವರ ಮಾರ್ಗದರ್ಶನದಲ್ಲಿ ಬನವಾಸಿ ಪಿ.ಎಸ್.ಐ. ಮಹಂತೇಶ ನಾಯಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.