ಕರ್ನಾಟಕ

karnataka

ETV Bharat / state

ಪಾಸ್ ಇದ್ದರೂ ಗುತ್ತಿಗೆದಾರನಿಗೆ ಬಿತ್ತು ದಂಡ... ಯಾಕೆ ಗೊತ್ತಾ? - ಕರ್ನಾಟಕ ಲಾಕ್ಡೌನ್

ಕಾರವಾರದ ಹಬ್ಬುವಾಡ ರಸ್ತೆಯಲ್ಲಿ ಗುತ್ತಿಗೆದಾರನೊಬ್ಬ ಪಾಸ್ ಇದೆ ಎಂದು ಹೇಳಿ 10ಕ್ಕೂ ಹೆಚ್ಚು ಕಾರ್ಮಿಕರನ್ನು ಲಾರಿಯಲ್ಲಿ ಕರೆದೊಯ್ಯುತ್ತಿದ್ದ. ಇದನ್ನು ಗಮನಿಸಿದ ಪಿಎಸ್ಐ ಎನ್.ಡಿ.ಜಕ್ಕಣ್ಣನವರ್, ಕಾರ್ಮಿಕರನ್ನು ದನದ ರೀತಿ ಸುರಕ್ಷತೆ ಇಲ್ಲದೆ ಲಾರಿಯಲ್ಲಿ ತುಂಬಿಕೊಂಡು ಕರೆದೊಯ್ಯುತ್ತಿರುವುದಕ್ಕೆ ದಂಡ ವಿಧಿಸಿ ಎಚ್ಚರಿಸಿ ಕಳುಹಿಸಿದ್ದಾರೆ.

Karwar
ಪಾಸ್ ಇದ್ದರೂ ಗುತ್ತಿಗೆದಾರನಿಗೆ ಬಿತ್ತು ದಂಡ

By

Published : May 10, 2021, 2:19 PM IST

ಕಾರವಾರ:ಪಾಸ್ ತೋರಿಸಿ ನೌಕಾನೆಲೆ ಕೆಲಸಕ್ಕೆಂದು ಲಾರಿಯಲ್ಲಿ ಹತ್ತಾರು ಜನರನ್ನು ಕೊಂಡೊಯ್ಯುತ್ತಿದ್ದ ಗುತ್ತಿಗೆದಾರನಿಗೆ ದಂಡ ಹಾಕುವ ಮೂಲಕ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಪಾಸ್ ಇದ್ದರೂ ಗುತ್ತಿಗೆದಾರನಿಗೆ ಬಿತ್ತು ದಂಡ

ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂದಿನಿಂದ ಕಟ್ಟುನಿಟ್ಟಿನ ಲಾಕ್​ಡೌನ್​ ಘೋಷಣೆ ಮಾಡಿದ್ದು, ಎಲ್ಲೆಡೆ ಚೆಕ್ ಪೋಸ್ಟ್ ಮಾಡಿ ಅನಗತ್ಯ ಓಡಾಡುವ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅದರಂತೆ, ಕಾರವಾರದ ಹಬ್ಬುವಾಡ ರಸ್ತೆಯಲ್ಲಿ ಗುತ್ತಿಗೆದಾರನೊಬ್ಬ ಪಾಸ್ ಇದೆ ಎಂದು ಹೇಳಿ 10ಕ್ಕೂ ಹೆಚ್ಚು ಕಾರ್ಮಿಕರನ್ನು ಲಾರಿಯಲ್ಲಿ ಕರೆದೊಯ್ಯುತ್ತಿದ್ದ.

ಕಾರ್ಮಿಕರನ್ನು ದನದ ರೀತಿ ಸುರಕ್ಷತೆ ಇಲ್ಲದೆ ಲಾರಿಯಲ್ಲಿ ತುಂಬಿಕೊಂಡು ಕರೆದೊಯ್ಯುತ್ತಿರುವುದಕ್ಕೆ ಗರಂ ಆದ ಪಿಎಸ್ಐ ಎನ್.ಡಿ.ಜಕ್ಕಣ್ಣನವರ್, ಗುತ್ತಿಗೆದಾರನಿಗೆ ದಂಡ ವಿಧಿಸಿ ಎಚ್ಚರಿಸಿ ಕಳುಹಿಸಿದ್ದಾರೆ.

ಇದಲ್ಲದೆ, ನಗರದಲ್ಲಿ ಇಂದು ಅನಗತ್ಯವಾಗಿ ಓಡಾಡುತ್ತಿದ್ದ 50ಕ್ಕೂ ಹೆಚ್ಚು ಬೈಕ್ ಸೇರಿದಂತೆ ಇನ್ನಿತರ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಗರದೆಲ್ಲೆಡೆ ಬಿಗಿ ಬಂದೊಬಸ್ತ್ ಕಲ್ಪಿಸಿದ್ದು, ಅನಗತ್ಯವಾಗಿ ಓಡಾಡುವವರ ಮೇಲೆ ಹದ್ದಿನ ಕಣ್ಣಿಡಲಾಗಿದೆ.

ಓದಿ:ಈಟಿವಿ ಭಾರತ ಎಕ್ಸ್​ಕ್ಲೂಸಿವ್..​ ಗಂಗಾ ನದಿಯಲ್ಲಿ ತೇಲಿ ಬಂದ್ವು 50ಕ್ಕೂ ಹೆಚ್ಚು ಮೃತದೇಹಗಳು!

ABOUT THE AUTHOR

...view details