ಕರ್ನಾಟಕ

karnataka

ETV Bharat / state

ಕಾರವಾರದ ಪೊಲೀಸ್ ಠಾಣೆಗೆ ಪ್ರವಾಹದ ನೀರು: ದಾಖಲೆಗಳು ಸಂಪೂರ್ಣ ನಾಶ - ಉತ್ತರಕನ್ನಡದಲ್ಲಿ ಕಾಳಿ ನದಿ ಪ್ರವಾಹ

ಉತ್ತರಕನ್ನಡದಲ್ಲಿ ಕೆಲ ದಿನಗಳಿಂದ ಸುರಿದ ಮಳೆಗೆ ಸಾಕಷ್ಟು ಹಾನಿ ಸಂಭಿವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹತ್ತಾರು ಮಳೆಗಳಿಗೆ ನೀರು ನುಗ್ಗಿದೆ. ಇದರ ಜೊತೆಗೆ ಪೊಲೀಸ್​ ಠಾಣೆ ಮುಳುಗಡೆಯಾಗಿ ದಾಖಲೆಗಳೆಲ್ಲ ನಾಶವಾಗಿರುವ ಘಟನೆ ನಡೆದಿದೆ.

Police station records destroyed with Kali river flood in Karwar
ಪ್ರವಾಹಕ್ಕೆ ಮುಳುಗಡೆಯಾದ ಪೊಲೀಸ್ ಠಾಣೆ

By

Published : Jul 25, 2021, 5:21 PM IST

ಕಾರವಾರ:ಕಾಳಿ ನದಿ ಪ್ರವಾಹದಿಂದ ಮನೆ, ಅಂಗಡಿಗಳು ಮಾತ್ರವಲ್ಲದೆ ಪೊಲೀಸ್ ಠಾಣೆ ಮುಳುಗಡೆಯಾಗಿದೆ. ಹೀಗಾಗಿ ಠಾಣೆಯಲ್ಲಿದ್ದ ದಾಖಲೆಗಳು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಕಾರವಾರ ತಾಲೂಕಿನ ಮಲ್ಲಾಪುರದಲ್ಲಿ ನಡೆದಿದೆ.

ಕಾಳಿ ನದಿ ಪ್ರವಾಹದಿಂದ ಪೊಲೀಸ್​ ಠಾಣೆ ಮುಳುಗಡೆ

ಕದ್ರಾ ಜಲಾಶಯದಿಂದ ನಿರಂತರವಾಗಿ ನೀರು ಹರಿಬಿಟ್ಟಿದ್ದು ಕಾಳಿ ನದಿ ವ್ಯಾಪ್ತಿಯ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಪ್ರವಾಹದಿಂದ ಕದ್ರಾ ಮಲ್ಲಾಪುರ ವ್ಯಾಪ್ತಿಯಲ್ಲಿ ಸಾಕಷ್ಟು ಮನೆಗಳು ಧರೆಗುರುಳಿವೆ. ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದೆ. ‌ಇದರ ಜೊತೆಗೆ ಮಲ್ಲಾಪುರ ಪೊಲೀಸ್ ಠಾಣೆ ಕೂಡ ಮುಳುಗಡೆಯಾಗಿದೆ.

ಇದೀಗ ನೀರು ಇಳಿದ ಕಾರಣ ಅಳಿದುಳಿದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ನೀರಲ್ಲಿ ಒದ್ದೆಯಾಗಿರುವ ದಾಖಲೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ‌. ಠಾಣೆಯಲ್ಲಿದ್ದ ಯಂತ್ರೋಪಕರಣಗಳು ಸಹ ನೀರಲ್ಲಿ ತೇಯ್ದು ಹಾನಿಯಾಗಿದ್ದು, ತಾತ್ಕಾಲಿಕವಾಗಿ ಕೈಗಾ ಟೌನ್‌ಶಿಪ್ ಕಟ್ಟದಲ್ಲಿ ಪೊಲೀಸ್ ಠಾಣೆ ಮಾಡಲಾಗಿದೆ. 2019ರ ನೆರೆ ಪ್ರವಾಹದಲ್ಲಿಯೂ ಈ ಪೊಲೀಸ್ ಠಾಣೆ ಮುಳುಗಡೆಯಾಗಿತ್ತು.

ಪ್ರವಾಹಕ್ಕೆ ಕುಸಿದ ಮನೆ: ತಾತ್ಕಾಲಿಕ ಸೂರು ನಿರ್ಮಿಸಿಕೊಟ್ಟ ಕುಮಟಾ ಕರೆ ಒಕ್ಕಲಿಗರ ಸಂಘ

ಅಘನಾಶಿನಿ ನದಿ ಪ್ರವಾಹದ ಅವಾಂತರ

ಅಘನಾಶಿನಿ ನದಿ ಪ್ರವಾಹದಿಂದಾಗಿ ಮುಳುಗಡೆಯಾಗಿದ್ದ ಮನೆಯೊಂದು ಬಹುತೇಕ ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಾರಣ ಕುಟುಂಬಸ್ಥರಿಗೆ ಸಂಘಟನೆಯೊಂದು ತಾತ್ಕಾಲಿಕ ಶೆಡ್ ನಿರ್ಮಾಣ ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಕುಮಟಾ ತಾಲೂಕಿನ ಬಡಾಳ ಗ್ರಾಮದ ಅತ್ಯಾಳದಲ್ಲಿ ನಡೆದಿದೆ.

ಶಿರಸಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಮಳೆಯಾದ ಕಾರಣ ಅಘನಾಶಿನಿ ನದಿ ಉಕ್ಕಿ ಹರಿದ ಪರಿಣಾಮ ಪ್ರವಾಹ ಸೃಷ್ಟಿಯಾಗಿತ್ತು. ಬಡಾಳ ಭಾಗದಲ್ಲಿ ಹತ್ತಾರು ಮನೆಗಳು ಮುಳುಗಡೆಯಾಗಿದ್ದವು. ಅಲ್ಲದೆ ಅತ್ಯಾಳದಲ್ಲಿ ಬೀರಾ ಗೌಡ ಎಂಬುವವರ ಮಣ್ಣಿನ ಮನೆಗೆ ಎರಡು ದಿನಗಳ ಕಾಲ ನೀರು ತುಂಬಿಕೊಂಡಿದ್ದ ಕಾರಣ ಮನೆಯ ಒಂದು ಭಾಗ ಕುಸಿದು ಬಿದ್ದಿದೆ.

ಕುಟುಂಬವೊಂದಕ್ಕೆ ಶೆಡ್​ ನಿರ್ಮಿಸಿ ಮಾನವೀಯತೆ ಮೆರೆದ ಸಂಘಟನೆ

ಇದೇ ಕಾರಣದಿಂದ ಕಾಳಜಿ ಕೇಂದ್ರದಲ್ಲಿದ್ದ ಕುಟುಂಬಸ್ಥರ ನೆರವಿಗೆ ಧಾವಿಸಿದ ಕುಮಟಾ ತಾಲೂಕಾ ಕರೆ ಒಕ್ಕಲಿಗ ಸಂಘದ ಸುಮಾರು 20ಕ್ಕೂ ಹೆಚ್ಚು ಸದಸ್ಯರು ಕುಟುಂಬಸ್ಥರಿಗೆ ತಾತ್ಕಾಲಿಕವಾಗಿ ತಂಗಲು ಶ್ರಮದಾನದ ಮೂಲಕ ಚಪ್ಪರ ಸಿದ್ಧಪಡಿಸಿ ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅಲ್ಲದೆ ಕುಟುಂಬಸ್ಥರಿಗೆ ಸರ್ಕಾರ ಕೂಡಲೇ ಅಗತ್ಯ ವಸ್ತುಗಳ ಜೊತೆಗೆ ಸೂಕ್ತ ಪರಿಹಾರ ಒದಗಿಸಿ ಸೂರು ಕಲ್ಪಿಸುವಂತೆಯೂ ಸದಸ್ಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ಇದನ್ನೂಓದಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ: ವಿಜಯನಗರ ಜಿಲ್ಲೆಯಲ್ಲಿ ಪ್ರವಾಹ ಭೀತಿ

ABOUT THE AUTHOR

...view details