ಶಿರಸಿ: ದಾಂಡೇಲಿಯಲ್ಲಿ ನಡೆದ ಕಳ್ಳತನ ಆರೋಪ ಅಡಿ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನನ್ನು ಪೋಲಿಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಕಂಬಿ ಹಿಂದೆ ಕಳ್ಳ ಶಿಕ್ಷಕ: ಆಭರಣ ವಶ - ಮನೆಗಳ್ಳ ಶಿಕ್ಷಕನ ಬಂಧನ
ಮನೆಗಳ್ಳತನ ಪ್ರಕರಣದಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನನ್ನು ಬಂಧಿಸಿದ ಪೊಲೀಸರು.

ಆರೋಪಿ ಸುರೇಶ ಲಕ್ಷ್ಮಣ ಕಸಳ್ಳಿ
ನಗರದ ಸೋರಗಾಂವಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ದೈಹಿಕ ಶಿಕ್ಷಣ ಶಿಕ್ಷಕ ಸುರೇಶ ಲಕ್ಷ್ಮಣ ಕಸಳ್ಳಿ ಎಂಬಾತನನ್ನು ಬಂಧಿಸಲಾಗಿತ್ತು. ಆರೋಪಿ ಮಾರುತಿ ನಗರದ ನಿವಾಸಿಯಾಗಿದ್ದು, ಆಜಾದ ನಗರಗಳಲ್ಲಿ ಮನೆಗಳ್ಳತನ ನಡೆಸಿದ್ದ ಎನ್ನಲಾಗಿದೆ.
ಬಂಧಿತ ಆರೋಪಿಯಿಂದ ಪೊಲೀಸರು ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.