ಕರ್ನಾಟಕ

karnataka

ETV Bharat / state

ನಿಷೇಧದ ಬೆನ್ನಲ್ಲೇ ಶಿರಸಿ ಪಿಎಫ್ಐ ಅಧ್ಯಕ್ಷನ ಮನೆ ಮೇಲೆ ಪೊಲೀಸ್​​ ದಾಳಿ - ಪಿಎಫ್‌ಐ ತಾಲೂಕಾಧ್ಯಕ್ಷ ಅಬ್ದುಲ್ ಗಫೂರ್ ಮನೆಯಲ್ಲಿ ಶೋಧ

ಶಿರಸಿಯಲ್ಲಿ ಪಿಎಫ್‌ಐ ತಾಲೂಕು ಅಧ್ಯಕ್ಷನ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.

police-raid-on-pfi-leader-home-at-sirsi
ನಿಷೇಧದ ಬೆನ್ನಲ್ಲೇ ಶಿರಸಿ ಪಿಎಫ್ಐ ಅಧ್ಯಕ್ಷನ ಮನೆ ಮೇಲೆ ಪೊಲೀಸ್​​ ದಾಳಿ

By

Published : Sep 28, 2022, 8:13 PM IST

ಶಿರಸಿ(ಉತ್ತರ ಕನ್ನಡ) :ದೇಶದಲ್ಲಿ ಪಿಎಫ್​ಐ ನಿಷೇಧ ಬೆನ್ನಲ್ಲೇ ಜಿಲ್ಲೆಯ ಶಿರಸಿಯಲ್ಲಿ ಸಂಘಟನೆ ಸದಸ್ಯರ ಮನೆ ಹಾಗೂ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.

ಶಿರಸಿಯ ನೆಹರೂನಗರ ನಿವಾಸಿ, ಪಿಎಫ್‌ಐ ತಾಲೂಕು ಅಧ್ಯಕ್ಷ ಅಬ್ದುಲ್ ಗಫೂರ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಮೊನ್ನೆಯಷ್ಟೇ ಅಬ್ದುಲ್ ವಶಕ್ಕೆ ಪಡೆದು ಕಲಂ 107ರಡಿ ಪ್ರಕರಣ ದಾಖಲಿಸಿ ಬಳಿಕ ಬಿಡುಗಡೆ ಮಾಡಲಾಗಿತ್ತು.

ಶಿರಸಿಯ ತಹಶೀಲ್ದಾರ್ ಶ್ರೀಧರ್, ಡಿವೈಎಸ್‌ಪಿ ರವಿ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 30ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯೊಂದಿಗೆ ದಾಳಿ ನಡೆದಿದೆ. ಗಫೂರ್ ಮನೆಯಿಂದ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ:ಪಿಎಫ್‌ಐ ನಿಷೇಧಕ್ಕೂ, ಪ್ರವೀಣ್ ನೆಟ್ಟಾರು ಹತ್ಯೆಗೂ ಇದೆ ನಂಟು.. ಕೇಂದ್ರದ ಅಧಿಸೂಚನೆಯಲ್ಲಿ ಪ್ರವೀಣ್ ನೆಟ್ಟಾರು ಹೆಸರು ಉಲ್ಲೇಖ..!

ABOUT THE AUTHOR

...view details