ಭಟ್ಕಳ: ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್ ವಾಹನ ಕಾಯ್ದೆ ಭಟ್ಕಳ ತಾಲೂಕಿನಲ್ಲಿಯೂ ಪ್ರಾರಂಭವಾಗಿದ್ದು, ಇಲ್ಲಿನ ನಗರ ಠಾಣೆಯ ಪೊಲೀಸರಿಂದ ಜನಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಭಟ್ಕಳದಲ್ಲಿ ಹೊಸ ಮೋಟಾರ್ ವಾಹನ ಕಾಯ್ದೆ ಕುರಿತು ಪೊಲೀಸರಿಂದ ಜಾಗೃತಿ - New Motor Vehicle Act
ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್ ವಾಹನ ಕಾಯ್ದೆ ಭಟ್ಕಳ ತಾಲೂಕಿನಲ್ಲಿಯೂ ಪ್ರಾರಂಭವಾಗಿದ್ದು, ನಗರ ಠಾಣೆಯ ಪೊಲೀಸರಿಂದ ಜನಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ಇಲ್ಲಿನ ಶಂಶುದ್ದೀನ್ ಸರ್ಕಲ್ ಹಳೇ ಬಸ್ ನಿಲ್ದಾಣ ಮಾರುಕಟ್ಟೆ ಪ್ರದೇಶಗಳಲ್ಲಿ ನಿಯಮ ಮೀರಿದರೆ ವಿಧಿಸಲಾಗುವ ದಂಡದ ಕುರಿತಾಗಿ ಬ್ಯಾನರ್ ಹಿಡಿದು ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಜಾಗೃತಿಯ ಮೂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಠಾಣೆ ಸಿಪಿಐ ರಾಮಚಂದ್ರ, ಸುರಕ್ಷಿತ ವಾಹನ ಚಾಲನೆ ಇಂದು ಅಗತ್ಯವಾಗಿದೆ. ಹೆಲ್ಮೆಟ್ ಧರಿಸಿ ದಂಡದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ನಿಮ್ಮ ಪ್ರಾಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ ಹೆಲ್ಮೆಟ್ ಇಲ್ಲದೇ ಒಂದು ಸಾವಿರ ದಂಡ ತುಂಬುವವರು ಅದೇ ಒಂದು ಸಾವಿರ ಹಣದಿಂದ ಉತ್ತಮವಾದ ಹೆಲ್ಮೆಟ್ ಖರೀದಿಸಿ, ದಂಡದಿಂದ ತಪ್ಪಿಸಿಕೊಳ್ಳಿ ಎಂದು ಹೇಳಿದರು.