ಕಾರವಾರ: ಪೊಲೀಸರು ಎಷ್ಟೇ ಜಾಗೃತರಾಗಿದ್ದರೂ ಟ್ರಾಫಿಕ್ ನಿಯಮಗಳನ್ನ ಪಾಲಿಸದೆ ಓಡಾಡುಡುವ ಜನರನ್ನು ತಪ್ಪಿಸೋಕೆ ಸಾಧ್ಯವಾಗುವುದಿಲ್ಲ. ಹಾಗಂತ ಎಷ್ಟೇ ಸಿಬ್ಬಂದಿ ಇದ್ರೂ ವಾಹನ ಸವಾರರನ್ನ ನಿಯಂತ್ರಣದಲ್ಲಿಡೋದು ಸುಲಭದ ಕೆಲಸವಲ್ಲ. ಹೀಗಾಗಿ, ಉತ್ತರಕನ್ನಡ ಪೊಲೀಸ್ ಇಲಾಖೆ ಒಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.
ನಗರದಲ್ಲಿ ಉಂಟಾಗಿದ್ದ ಟ್ರಾಫಿಕ್ ಕಿರಿಕಿರಿಯನ್ನ ನಿಯಂತ್ರಿಸೋದಕ್ಕೆ ಪೊಲೀಸ್ ಇಲಾಖೆ ವಿನೂತನ ಪ್ಲಾನ್ ಮಾಡಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಸಂಚಾರ ನಿರ್ವಹಣಾ ಕೇಂದ್ರವನ್ನ ಪ್ರಾರಂಭಿಸಿದೆ. ಬೆಂಗಳೂರು ನಗರದ ಮಾದರಿಯ ರೀತಿಯಲ್ಲಿಯೇ ತಾಲೂಕಿನಲ್ಲೂ 360 ಡಿಗ್ರಿಯಲ್ಲಿ ತಿರುಗುವ ವೈರ್ಲೆಸ್ PTZ ಕ್ಯಾಮರಾಗಳನ್ನ ಅಳವಡಿಸಿದೆ.
ನಗರದಲ್ಲಿ ಪ್ರತಿನಿತ್ಯ ಹೆಚ್ಚು ವಾಹನ ದಟ್ಟಣೆ ಇರುವ ಸುಭಾಷ್ ವೃತ್ತ, ಸವಿತಾ ಸರ್ಕಲ್, ಶಿವಾಜಿ ಸರ್ಕಲ್ ಹಾಗೂ ಹೂವಿನ ಚೌಕದಲ್ಲಿ ಅತ್ಯಾಧುನಿಕ ಮಾದರಿಯ 4 ಹೆಚ್.ಡಿ ಸಿಸಿಕ್ಯಾಮರಾಗಳನ್ನ ಹಾಕಲಾಗಿದೆ. ಇದರೊಂದಿಗೆ ಮೈಕ್ ವ್ಯವಸ್ಥೆ ಸಹ ಇದೆ. ಹೀಗಾಗಿ, ಟ್ರಾಫಿಕ್ ನಿಯಮ ಉಲ್ಲಂಘಿಸುವ ವಾಹನಗಳನ್ನ ಸಿಸಿಕ್ಯಾಮರಾದಲ್ಲಿ ವೀಕ್ಷಿಸಿ ಕೂಡಲೇ ಮೈಕ್ ಮೂಲಕ ಸವಾರರಿಗೆ ಎಚ್ಚರಿಕೆಯನ್ನ ನೀಡಲಾಗುತ್ತದೆ.