ಕರ್ನಾಟಕ

karnataka

ETV Bharat / state

ಮಾಸ್ಕ್ ಇಲ್ಲದೆ ಮದುವೆ ಕಾರ್ಡ್ ಹಿಡಿದು ಬಂದವನಿಗೆ ಲಾಠಿ ರುಚಿ ತೋರಿಸಿದ ಪೊಲೀಸರು - Police beat to people

ಮಾಸ್ಕ್ ಇಲ್ಲದೆ ಮದುವೆಗೆ ಹೊರಟವನನ್ನು ತಡೆದ ಪೊಲೀಸರು, ಮಾಸ್ಕ್ ಎಲ್ಲಿ ಎಂದು ಕೇಳಿದಾಗ ಕಥೆ ಹೇಳಲು ಪ್ರಾರಂಭಿಸಿದ್ದರಿಂದ ಲಾಠಿ ಎತ್ತಿದ್ದಾರೆ. ಅಲ್ಲದೆ ಮಾಸ್ಕ್ ಧರಿಸುವಂತೆ ಪೊಲೀಸರು ಸೂಚಿಸಿ ಲಾಠಿ ಬೀಸಿದ್ದಾರೆ.

ಮಾಸ್ಕ್ ಇಲ್ಲದೆ ಮದುವೆ ಕಾರ್ಡ್ ಹಿಡಿದು ಬಂದವನಿಗೆ ಲಾಠಿ ರುಚಿ ತೋರಿಸಿದ ಪೊಲೀಸರು
ಮಾಸ್ಕ್ ಇಲ್ಲದೆ ಮದುವೆ ಕಾರ್ಡ್ ಹಿಡಿದು ಬಂದವನಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

By

Published : Apr 24, 2021, 6:00 PM IST

ಕಾರವಾರ: ಮಾಸ್ಕ್ ಧರಿಸದೆ ಆಹ್ವಾನ ಪತ್ರಿಕೆ ಹಿಡಿದು ಮದುವೆಗೆ ತೆರಳುತ್ತಿದ್ದ ವ್ಯಕ್ತಿಯೋರ್ವನಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಎಚ್ಚರಿಸಿದ ಘಟನೆ ಕಾರವಾರದ ಸುಭಾಷ್ ಸರ್ಕಲ್​​ನಲ್ಲಿ ನಡೆದಿದೆ.

ಮಾಸ್ಕ್ ಇಲ್ಲದೆ ಮದುವೆ ಕಾರ್ಡ್ ಹಿಡಿದು ಬಂದವನಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ವೀಕೆಂಡ್ ಕರ್ಫ್ಯೂ ಹಿನ್ನೆಲೆ ನಗರವೇ ಸ್ತಬ್ಧಗೊಂಡಿರುವ ವೇಳೆ ಮದುವೆ ಆಹ್ವಾನ ಪತ್ರಿಕೆ ಹಿಡಿದು ಮದುವೆಗೆ ತೆರಳುತ್ತಿರುವುದಾಗಿ ವ್ಯಕ್ತಿಯೋರ್ವ ಪೊಲೀಸರ ಎದುರು ಆಗಮಿಸಿದ್ದ. ಈ ವೇಳೆ ಪೊಲೀಸರು ತಡೆದು ವಿಚಾರಿಸಿದಾಗ ಮದುವೆಗೆ ತೆರಳುತ್ತಿರುವುದಾಗಿ ಕಾರ್ಡ್ ತೋರಿಸಿದ್ದ.

ಪೊಲೀಸರು ಮಾಸ್ಕ್ ಎಲ್ಲಿ ಎಂದು ಕೇಳಿದಾಗ ಕಥೆ ಹೇಳಲು ಪ್ರಾರಂಭಿಸಿದ್ದರಿಂದ ಲಾಠಿ ಎತ್ತಿದ್ದಾರೆ. ಅಲ್ಲದೆ ಮಾಸ್ಕ್ ಧರಿಸುವಂತೆ ಸೂಚಿಸಿ ಲಾಠಿ ಬೀಸಿದ್ದಾರೆ. ಇದರಿಂದ ಹೆದರಿದ ವ್ಯಕ್ತಿ ಅಲ್ಲಿಂದ ವಾಪಸ್​ ತೆರಳಿದ್ದಾನೆ.

ABOUT THE AUTHOR

...view details