ಕರ್ನಾಟಕ

karnataka

ETV Bharat / state

48 ಗಂಟೆಯಲ್ಲಿ ಕಳ್ಳನನ್ನು ಬಂಧಿಸಿದ ಪೊಲೀಸರು: 64 ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶ

ಶಿರಸಿ ತಾಲೂಕಿನ ಎಸಳೆಯ ಕುಶಾಲ ಜೋಗಳೇಕರ ಎಂಬ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನಿಂದ 64,400 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಶಿರಸಿ ಪೊಲೀಸ್​ ಠಾಣೆ
ಶಿರಸಿ ಪೊಲೀಸ್​ ಠಾಣೆ

By

Published : Nov 19, 2020, 10:35 PM IST

ಶಿರಸಿ: ಎರಡು ದಿನಗಳ ಹಿಂದೆ ಕಸ್ತೂರ ಬಾ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ ಆತನಿಂದ 64400 ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಶಿರಸಿ ತಾಲೂಕಿನ ಎಸಳೆಯ ಕುಶಾಲ ಜೋಗಳೇಕರ (23) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 37500 ರೂ. ಮೌಲ್ಯದ ಬಂಗಾರದ ಸರ​, 14,600 ರೂ. ಮೌಲ್ಯದ ತಾಳಿ ಸರ, 3300 ರೂ. ಮೌಲ್ಯದ ಬಂಗಾರದ ಉಂಗುರ, 3000 ರೂ. ಮೌಲ್ಯದ ಕಿವಿಯೊಲೆ ಹಾಗೂ 6 ಸಾವಿರ ನಗದು ಸೇರಿದಂತೆ ಒಟ್ಟು 64,400 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕಸ್ತೂರ ಬಾ ನಗರದ ಶ್ವೇತಾ ಕೊರಚರ ಎಂಬುವರ ಮನೆಯಲ್ಲಿ ನ. 13ರಿಂದ ನ. 17ರ ಅವಧಿಯಲ್ಲಿ ಅಂದಾಜು 60 ಸಾವಿರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿತ್ತು. ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ 48 ಗಂಟೆಯಲ್ಲಿ ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details