ಶಿರಸಿ:ಸಾಕಷ್ಟು ಬಾರಿ ದೇಶದ ಜನತೆಯೊಂದಿಗೆ ಬೆರೆತು ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯುತ್ತಾರೆ. ಈ ಬಾರಿ ಶಿರಸಿಯ ಮಂಜುಗುಣಿಯ ನಾಗೇಂದ್ರ ಶೇಟ್ ಎಂಬ ಯುವಕನಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಅವರ 69ನೇ ಹುಟ್ಟುಹಬ್ಬದ ನಿಮಿತ್ತ ಪತ್ರ ಬರೆದು ಶುಭಾಶಯ ಕೋರಿದ್ದ ನಾಗೇಂದ್ರ ಶೇಟ್ಗೆ ಪ್ರಧಾನಿ ಎರಡು ತಿಂಗಳ ಬಳಿಕ ಪ್ರತಿಕ್ರಿಯಿಸಿದ್ದಾರೆ. ನೀವು ಕಳಿಸಿರುವ ಹುಟ್ಟುಹಬ್ಬದ ಶುಭಾಶಯಗಳನ್ನು ನಾನು ಸ್ವೀಕರಿಸಿದ್ದೇನೆ. ಇದು ನಮ್ಮ ರಾಷ್ಟ್ರ ಸೇವೆಯಲ್ಲಿ ಶ್ರಮಿಸಲು ಒಂದು ಶತಕೋಟಿಗೂ ಅಧಿಕ ಜನರ, ಮಿತಿಯಿಲ್ಲದ ವಾತ್ಸಲ್ಯ ಮತ್ತು ಕಾಳಜಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಶುಭಾಶಯ ನನಗೆ ಬಹಳ ಸಂತೋಷ ತಂದಿದ್ದು, ನಿಮಗೆ ನನ್ನ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಬರೆದಿದ್ದಾರೆ.