ಕರ್ನಾಟಕ

karnataka

By

Published : Oct 6, 2019, 10:59 AM IST

ETV Bharat / state

ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ: ಜಾಲಿ ಪಟ್ಟಣ ಪಂಚಾಯತ್​ ವತಿಯಿಂದ ಪ್ಲಾಸ್ಟಿಕ್ ನಿಷೇಧ ಜಾಥಾ

ಅಕ್ಟೋಬರ್ 2 ರಿಂದ ಜಿಲ್ಲಾಧಿಕಾರಿ ಆದೇಶದಂತೆ ಪ್ಲಾಸ್ಟಿಕ್ ನಿಷೇಧ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ತಾಲೂಕಿನ ಪಟ್ಟಣ ಪಂಚಾಯತ್ ವತಿಯಿಂದ ಜಾಥಾ ಹಮ್ಮಿಕೊಂಡಿದ್ದರು.

ಜಾಲಿ ಪಟ್ಟಣ ಪಂಚಾಯತ್​ ವತಿಯಿಂದ ಪ್ಲಾಸ್ಟಿಕ್ ನಿಷೇಧ ಜಾಥಾ

ಭಟ್ಕಳ: ಪ್ಲಾಸ್ಟಿಕ್ ನಿಷೇಧದ ಕುರಿತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪುರಸಭೆ, ಪಟ್ಟಣ ಪಂಚಾಯತ್​ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸೇರ ಜಾಥಾ ನಡೆಸಿದ್ರು.

ಜಾಲಿ ಪಟ್ಟಣ ಪಂಚಾಯತ್​ ವತಿಯಿಂದ ಪ್ಲಾಸ್ಟಿಕ್ ನಿಷೇಧ ಜಾಥಾ

ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವಾಲಯ ಕರ್ನಾಟಕ ಸರ್ಕಾರ ಅಧಿಸೂಚನೆಯಂತೆ 11-3-2016ರ ಅನುಸಾರ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಪ್ಲೆಕ್ಸ್, ಬಾವುಟ, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಮ್ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ ಹಾಗೂ ಥರ್ಮೋಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋಬಿಡ್ಸ್ ನಂತಹ ವಸ್ತುಗಳನ್ನು ತಯಾರಿಕೆ, ಸಾರಬರಾಜು ಮತ್ತು ಬಳಕೆಯನ್ನು ಪಟ್ಟಣ ಪಂಚಾಯತ್​ ಜಾಲಿ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ.

ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದರ ಸಲುವಾಗಿ ಜಾಲಿ ಪಟ್ಟಣ ಪಂಚಾಯತ್​ನಿಂದ ನಡೆದ ಜಾಥಾ ರಾಷ್ಟ್ಟೀಯ ಹೆದ್ದಾರಿ ಮೂಲಕ ತೆಂಗಿನಗುಂಡಿ ಕ್ರಾಸ್ ಮಾರ್ಗವಾಗಿ ತಾಲೂಕು ಕ್ರೀಡಾಂಗಣದ ಮೂಲಕ ಪುನಃ ​ ಜಾಲಿ ಪಟ್ಟಣ ಪಂಚಾಯತ್​ಗೆ ತಲುಪಿತು. ಮೆರವಣಿಗೆಯುದ್ದಕ್ಕೂ ಪ್ರತೀ ಅಂಗಡಿಗಳಿಗೂ ಹೋಗಿ ಕರ ಪತ್ರವನ್ನು ನೀಡಿದರು.

ನಂತರ ಪುರಸಭೆಯ ಮುಖ್ಯಾಧಿಕಾರಿಯಾದ ದೇವರಾಜ, ಈ ಅಧಿನಿಯಮವನ್ನು ಉಲ್ಲಂಘಿಸಿದ್ದಲ್ಲಿ ಪರಿಸರ ಕಾಯ್ದೆ 1986 ಸೆಕ್ಷನ್ 19ರ ಅನ್ವಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಲಾಗುವುದು. ಜೊತೆಗೆ ಪಟ್ಟಣ ಪಂಚಾಯತ್​ ಎಸ್.ಡಬ್ಲ್ಯೂ.ಎಂ. ಬೈಲಾ ಅನುಸಾರ ದಂಡ ವಿಧಿಸಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ವಿ.ಪಿ.ಕೊಟ್ರಳ್ಳಿ ಪುರಸಭೆಯ ಮುಖ್ಯಾಧಿಕಾರಿ ದೇವರಾಜ, ಜಾಲಿ ಪಟ್ಟಣ ಪಂಚಾಯತ್​ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಜಾಲಿ ಪಟ್ಟಣ ಪಂಚಾಯತ್​ ಸಿಬ್ಬಂದಿ ಉಪಸ್ಥಿತರಿದ್ದರು

ABOUT THE AUTHOR

...view details