ಕಾರವಾರ: ಪ್ಲಾಸ್ಟಿಕ್ ನಿಷೇಧವನ್ನು ಮೊದಲು ನಮ್ಮ ನಮ್ಮ ಮನೆಯಿಂದಲೇ ಆರಂಭಿಸಬೇಕು ನಂತರ ಅದರ ದುಷ್ಪರಿಣಾಮದ ಕುರಿತು ಇತರರಿಗೆ ತಿಳಿಸಬೇಕು ಎಂದು ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಅಭಿಪ್ರಾಯಪಟ್ಟರು.
ಸಾಜಿದ್ ಅಹ್ಮದ್ ಮುಲ್ಲಾ ಅವರು ಭಟ್ಕಳ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ 'ಸ್ವಚ್ಚತಾ ಹಿ ಸೇವಾ' ಕಾರ್ಯಚರಣೆ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪರಿಸರದಲ್ಲಿ ಕರಗದ ಪ್ಲಾಸ್ಟಿಕ್ ಬಳಕೆಯಿಂದ ಸಮತೋಲನ ಕಾಯ್ದುಕೊಳ್ಳುವುದು ಮಹತ್ವವಾಗಿದೆ. ಪ್ಲಾಸ್ಟಿಕ್ ಬಳಕೆಯ ನಿಷೇಧದ ಕುರಿತು ಪುರಸಭೆ ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನಾವೆಲ್ಲ ಒಟ್ಟುಗೂಡಿ ಪ್ಲಾಸ್ಟಿಕ್ ಸಂಪೂರ್ಣ ನಿರ್ಮೂಲನೆ ಕುರಿತು ಹೆಜ್ಜೆ ಇಡಬೇಕಿದೆ ಎಂದರು.