ಕಾರವಾರ:ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಾರ್ಯಕರ್ತರ ಸಾವಿರಾರು ರೂ. ಹಣ ಕಳ್ಳತನ ಮಾಡಿದ ಘಟನೆ ಮುಂಡಗೋಡಿನಲ್ಲಿ ನಡೆದಿದೆ.
ಕೈ ಸಮಾವೇಶದಲ್ಲಿ ಕಳ್ಳರ 'ಕೈ' ಚಳಕ: ಹಣ, ಮೊಬೈಲ್ ಕಳೆದುಕೊಂಡ ಕಾರ್ಯಕರ್ತರು - ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ
ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕಾರ್ಯಕರ್ತರ ಸಾವಿರಾರು ರೂ. ಹಣ ಕಳ್ಳತನ ಮಾಡಿದ ಘಟನೆ ಮುಂಡಗೋಡಿನಲ್ಲಿ ನಡೆದಿದೆ.
![ಕೈ ಸಮಾವೇಶದಲ್ಲಿ ಕಳ್ಳರ 'ಕೈ' ಚಳಕ: ಹಣ, ಮೊಬೈಲ್ ಕಳೆದುಕೊಂಡ ಕಾರ್ಯಕರ್ತರು](https://etvbharatimages.akamaized.net/etvbharat/prod-images/768-512-4958943-thumbnail-3x2-r.jpg)
ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ನಿಂದ ಬೃಹತ್ ಕಾರ್ಯಕರ್ತರ ಸಮಾವೇಶ ಹಾಗೂ ಕೇಂದ್ರದ ಆರ್ಥಿಕ ನೀತಿಯ ವಿರುದ್ಧ ಜನಾಂದೋಲನ ಸಮಾವೇಶಕ್ಕೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಜಿಲ್ಲಾಮಟ್ಟದ ಅನೇಕ ಧುರೀಣರ ಪರ್ಸ್ ಮತ್ತು ಮೊಬೈಲ್ ಗಳನ್ನು ಲಪಟಾಯಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪದಾಧಿಕಾರಿ ಸತೀಶ್ ನಾಯ್ಕ ತಮ್ಮ ಕಿಸೆಯಲ್ಲಿದ್ದ ಸುಮಾರು 30 ಸಾವಿರ ರೂಪಾಯಿಗಳನ್ನು ಹಾಗೂ ರಾಮನಗರ ರಮೇಶ ನಾಯ್ಕ ಜೇಬಿನಿಂದ ತಲಾ 20 ಸಾವಿರ ರೂಪಾಯಿಗಳನ್ನು ಪಿಕ್ ಪಾಕೆಟ್ ಮಾಡಿದ್ದಾರೆ. ಪ್ರಕರಣ ಸಂಬಂಧ ಮುಂಡಗೋಡಿನ ಪೋಲಿಸರು ಒಬ್ಬನನ್ನು ಬಂಧಿಸಿದ್ದಾರೆ.