ಶಿರಸಿ:ತಾಲೂಕಿನ ಎಕ್ಕಂಬಿಯ ರೈಸ್ ಮಿಲ್ ಎದುರು ನಿಲ್ಲಿಸಿಟ್ಟಿದ್ದ ಪಿಕ್ ಅಪ್ ವಾಹನ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಿಕ್ ಅಪ್ ವಾಹನ ಕಳ್ಳರ ಬಂಧನ - undefined
ಪಿಕ್ ಅಪ್ ವಾಹನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ವಾಹನವನ್ನು ಜಪ್ತಿ ಮಾಡಲಾಗಿದೆ. ಶಿವಮೊಗ್ಗದ ಶಿಕಾರಿಪುರದ ಜಿಯಾವುಲ್ಲಾ ಸಾಬ್ (55), ಫಾಸಿಲ್ ಅಹಮ್ಮದ್ ಖಾನ್ (24), ಬರ್ಕತ್ ಅಲಿ ಸಾಬ್ (35) ಬಂಧಿತ ಆರೋಪಿಗಳಾಗಿದ್ದಾರೆ. ಶಫಿ ಹುಸೇನ್ ಸಾಬ (36) ತಲೆಮರೆಸಿಕೊಂಡ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಎಕ್ಕಂಬಿಯ ಜಯರಾಮ ನಾಯಕ ಎಂಬುವರ ಪಿಕ್ ಅಪ್ ವಾಹನವನ್ನು ( ಕೆಎ 22, ಬಿ 0282 ) ನಾಲ್ವರು ಕಳ್ಳರು ಸೇರಿ ಕಳೆದ ಮೇ. 13ರಂದು ಮನೆಗೆ ತಾಗಿಕೊಂಡಿರುವ ರೈಸ್ ಮಿಲ್ ಎದುರಿನಿಂದ ಅಪರಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.