ಕರ್ನಾಟಕ

karnataka

ETV Bharat / state

ಉತ್ತರ ಕನ್ನಡದಲ್ಲಿ ಶತಕ ಬಾರಿಸಿದ ಪೆಟ್ರೋಲ್ ದರ: ಜನರ ಆಕ್ರೋಶ - ಕಾರವಾರ

ಲಾಕ್​ಡೌನ್​​ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆ ತೈಲ ದರ ಏರಿಕೆ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Uttara kananda
ಉತ್ತರ ಕನ್ನಡ

By

Published : Jun 7, 2021, 12:25 PM IST

ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ದರ ಶತಕ ಬಾರಿಸಿದೆ.

ಜಿಲ್ಲೆಯ ಶಿರಸಿಯಲ್ಲಿ ನಿನ್ನೆ ನೂರರ ಗಡಿ ದಾಟಿದ್ದ ಪೆಟ್ರೋಲ್ ದರ ಇಂದು ಜಿಲ್ಲೆಯಾದ್ಯಂತ ಸಂಪೂರ್ಣವಾಗಿ ಸೆಂಚುರಿ ಬಾರಿಸಿದೆ. ಕಾರವಾರದಲ್ಲಿ ಸಾಮಾನ್ಯ ಪೆಟ್ರೋಲ್ 100.14 ರೂ. ಇದ್ದು, ಡೀಸೆಲ್ ದರ 92.88ರೂ. ತಲುಪಿದೆ. ಶಿರಸಿಯಲ್ಲಿ ಇಂದು ಸಾಮಾನ್ಯ ಪೆಟ್ರೋಲ್ ದರ 100.58ರೂ. ಇದ್ದು, ಡೀಸೆಲ್ ದರ 93.23ರೂ‌.ಗೆ ಏರಿದೆ.

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಈ ರೀತಿ ತೈಲ ಬೆಲೆ ಏರಿಕೆ ಜನರಿಗೆ ಚಾಟಿ ಏಟು ನೀಡಿದಂತಾಗಿದೆ. 100ರೂ.‌ ನೀಡಿದರೂ ಒಂದು ಲೀಟರ್ ಪೆಟ್ರೋಲ್ ಸಿಗದ್ದರಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಲಾಕ್​ಡೌನ್​​ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಜತೆ ತೈಲ ದರ ಏರಿಕೆ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಿ ಜನರು ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ:ಶತಕ ದಾಟಿದರೂ ನಿಲ್ಲದ ಪೆಟ್ರೋಲ್-ಡೀಸೆಲ್​ ದರ: ಇಂದು ಮತ್ತೆ ಬೆಲೆ ಏರಿಕೆ ಬರೆ

ABOUT THE AUTHOR

...view details