ಕರ್ನಾಟಕ

karnataka

ETV Bharat / state

ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ ಮಾಡುವ ಬೆದರಿಕೆ: ಮೊಬೈಲ್​ಗೆ ಬಂದ ಮೆಸೇಜ್​ ನಂಬಿ 3.33 ಲಕ್ಷ ಕಳೆದುಕೊಂಡ ವ್ಯಕ್ತಿ

ಅಪರಿಚಿತ ನಂಬರ್​​ನಿಂದ ನಿಮ್ಮ ಕರೆಂಟ್ ಬಿಲ್ ಪೆಂಡಿಂಗ್ ಇದೆ. ಇಂದು ಪಾವತಿಸಿದೇ ಇದ್ದರೆ ಇಂದು ರಾತ್ರಿ 10.30 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಮೆಸೇಜ್ ಬಂದಿತ್ತು. ಇದನ್ನು ನಂಬಿದ ವ್ಯಕ್ತಿ ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.

person-lost-money-by-believing-a-fraud-message
ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ ಮಾಡುವ ಬೆದರಿಕೆ: ಮೊಬೈಲ್​ಗೆ ಮೆಸೇಜ್​ ನಂಬಿ 3.33 ಲಕ್ಷ ಕಳೆದುಕೊಂಡ

By

Published : Oct 19, 2022, 10:32 AM IST

ಕಾರವಾರ(ಉತ್ತರ ಕನ್ನಡ):ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ನಾನಾ ರೀತಿಯಲ್ಲಿ ವಂಚಿಸಿ ಹಣ ಲಪಟಾಯಿಸುವ ಪ್ರಕರಣ ಬೆಳಕಿಗೆ ಬರುತ್ತಿವೆ. ಆದರೆ ಇಲ್ಲೊಂದು ಕಡೆ ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಕರೆಂಟ್ ಕಟ್ ಮಾಡಲಾಗುವುದು ಹೇಳಿ 3.33 ಲಕ್ಷ ಹಣ ಪೀಕಿರುವ ಪ್ರಕರಣ ನಡೆದಿದೆ.

ಕಾರವಾರ ತಾಲೂಕಿನ ಅರಗಾ ಗ್ರಾಮದ ನೇವಲ್ ಬೇಸ್​​ನಲ್ಲಿ ವಾಸವಾಗಿರುವ 62 ವರ್ಷದ ಉತ್ತರ ಪ್ರದೇಶ ಮೂಲದ ರಾಜಕುಮಾರ್ ಎಂಬುವರಿಗೆ ವಂಚನೆ ಮಾಡಲಾಗಿದೆ. ಹಣ ಕಳೆದುಕೊಂಡ ಬಗ್ಗೆ ಅವರು ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ರಾಜಕುಮಾರ್ ಅವರ ಮೊಬೈಲ್​ಗೆ ಅಕ್ಟೋಬರ್ 16ರಂದು ಅಪರಿಚಿತ ನಂಬರ್​​ನಿಂದ ನಿಮ್ಮ ಕರೆಂಟ್ ಬಿಲ್ ಪೆಂಡಿಂಗ್ ಇದೆ. ಇಂದು ಪಾವತಿಸಿದೇ ಇದ್ದರೆ ಇಂದು ರಾತ್ರಿ 10.30 ಗಂಟೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುವುದು ಎಂದು ಮೆಸೇಜ್ ಬಂದಿತ್ತು. ಅಲ್ಲದೇ ಮೊಬೈಲ್ ಸಂಖ್ಯೆಯೊಂದನ್ನು ನೀಡಿ ಎಲೆಕ್ಟ್ರಿಸಿಟಿ ಅಧಿಕಾರಿಯ ನಂಬರ್​ಗೆ ಸಂಪರ್ಕಿಸುವಂತೆ ತಿಳಿಸಲಾಗಿತ್ತು.

ಮೊಬೈಲ್​ಗೆ ಬಂದ ಸಂದೇಶವನ್ನು ನಂಬಿದ ರಾಜಕುಮಾರ್ ಆರೋಪಿತರ ಮೊಬೈಲ್​ಗೆ ಸಂಪರ್ಕಿಸಿದಾಗ, ಟೀಮ್ ವ್ಯೂವರ್ ಮತ್ತು ಆಟೋ ಫಾರ್ವಡ್ ಎಸ್​ಎಂಎಸ್​​ ಟು ಫೋನ್ ಎನ್ನುವ ಆ್ಯಪ್ ಡೌನ್​​ಲೋಡ್ ಮಾಡಿಕೊಳ್ಳಲು ತಿಳಿಸಿದ್ದರು. ಬಳಿಕ ಆರೋಪಿತರು ವಾಟ್ಸ್​ಆ್ಯಪ್ ವಿಡಿಯೋ ಕರೆ ಮಾಡಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್​​ ತೋರಿಸುವಂತೆ ಹೇಳಿದ್ದಾರೆ.

ಅದಾದ ನಂತರ ರಾಜಕುಮಾರ್ ಅವರ ಎಸ್​ಬಿಐ ಡೆಬಿಟ್ ಕಾರ್ಡ್​​ನಿಂದ 14,165 ರೂಪಾಯಿ, ಏಕ್ಸಿಸ್ ಬ್ಯಾಂಡ್ ಡೆಬಿಟ್ ಕಾರ್ಡ್​​ನಿಂದ 99,109 ಹಾಗೂ ಕ್ರೆಡಿಟ್ ಕಾರ್ಡಿನಿಂದ 2,19,985 ಸೇರಿ ಒಟ್ಟು 3,33,259 ಲಕ್ಷ ರೂ. ಹಣ ಲಪಟಾಯಿಸಲಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಣ ಕಳೆದುಕೊಂಡವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜನರು ಮೊಬೈಲ್​ನಲ್ಲಿ ಬರುವ ಮೆಸೇಜ್ ಒಮ್ಮೆಲೇ ನಂಬಿ ಮೋಸ ಹೋಗಬಾರರು. ಯಾರು, ಯಾಕೆ ಮೆಸೇಜ್ ಕಳಿಸಿದ್ದಾರೆ ಎನ್ನುವುದನ್ನು ತಿಳಿಯಬೇಕು. ಒಂದೊಮ್ಮೆ ಆರೋಪಿತರು ಹಣ ಲಪಟಾಯಿಸಿದ್ದು ಗೊತ್ತಾದರೆ ತಕ್ಷಣ ಸಿಇಎನ್ ಠಾಣೆಗೆ ಬಂದು ದೂರು ನೀಡಿ. ಇಲ್ಲದಿದ್ದರೆ 1930ಗೆ ಸಂಪರ್ಕಿಸಿದರೆ ಬ್ಯಾಂಕ್​ನಿಂದ ಡ್ರಾ ಆದ ಹಣ ಹೋಲ್ಡ್ ಮಾಡಬಹುದು. ಅನಾವಶ್ಯಕವಾಗಿ ವಂಚನೆಗೊಳಗಾಗಿ ಹಣ ಕಳೆದುಕೊಳ್ಳಬಾರದು. ಜನರು ಎಚ್ಚರದಿಂದ ಇರಬೇಕು ಎಂದು ಸಿಇಎನ್ ಪೊಲೀಸ್ ಠಾಣೆ ನಿರೀಕ್ಷಕರಾದ ಆನಂದ ಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ:ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಬೆಂಕಿ: ಕಡತಗಳು ಬೆಂಕಿಗಾಹುತಿ

ABOUT THE AUTHOR

...view details