ಭಟ್ಕಳ: ತಾಲೂಕಿನ ಬಂದರ ರೋಡ್ 1ನೇ ಕ್ರಾಸ್ನ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಸೊನಾರಕೇರಿಯ ನಿವಾಸಿ ಮಂಜುನಾಥ ರಾಯ ಶೇಟ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭಟ್ಕಳ: ತಾಲೂಕಿನ ಬಂದರ ರೋಡ್ 1ನೇ ಕ್ರಾಸ್ನ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಸೊನಾರಕೇರಿಯ ನಿವಾಸಿ ಮಂಜುನಾಥ ರಾಯ ಶೇಟ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಳೆದ 30 ವರ್ಷಗಳಿಂದ ಬಂದರ ರೋಡ್ 1ನೇ ಕ್ರಾಸ್ನಲ್ಲಿರುವ ಜಿನ್ನತ್ ಮಹಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಅಲ್ಲಿಯೇ ಪಕ್ಕದ ಶೆಡ್ನಲ್ಲಿ ಉಳಿದುಕೊಳ್ಳಲು ಸ್ಥಳ ನೀಡಲಾಗಿತ್ತು. ಆದರೆ, ಭಾನುವಾರದಂದು ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಶವವೂ ಬೆತ್ತಲೆಯಾಗಿ ರಕ್ತಸಿಕ್ತ ಸ್ಥಿತಿಯಲ್ಲಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.