ಶಿರಸಿ: ಹೊಟ್ಟೆನೋವು ಮತ್ತು ಮೈ ನೋವು ತಾಳಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬನವಾಸಿಯ ಬಿದ್ರಳ್ಳಿಯಲ್ಲಿ ನಡೆದಿದೆ.
ಹೊಟ್ಟೆನೋವು ತಾಳಲಾರದೆ ವ್ಯಕ್ತಿ ಆತ್ಮಹತ್ಯೆ - ಶಿರಸಿಯಲ್ಲಿ ಹೊಟ್ಟೆ ನೋವಿನಿಂದ ಆತ್ಮಹತ್ಯೆ
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿ ಹತ್ತಿರದ ಬಿದ್ರಳ್ಳಿ ನಿವಾಸಿ ಮಾರುತಿ ಎಂಬುವವರು ಹೊಟ್ಟೆನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![ಹೊಟ್ಟೆನೋವು ತಾಳಲಾರದೆ ವ್ಯಕ್ತಿ ಆತ್ಮಹತ್ಯೆ person committed suicide in shirsi](https://etvbharatimages.akamaized.net/etvbharat/prod-images/768-512-6859125-795-6859125-1587306281092.jpg)
ಮೃತ ಮಾರುತಿ ನಾಗೇಶ ನಾಯ್ಕ
ಇಲ್ಲಿನ ಬಿದ್ರಳ್ಳಿಯ ನಿವಾಸಿ ಮಾರುತಿ ನಾಗೇಶ ನಾಯ್ಕ (31) ನೇಣಿಗೆ ಶರಣಾದ ವ್ಯಕ್ತಿ ಆಗಿದ್ದು, ತೀವ್ರ ಹೊಟ್ಟೆನೋವಿನಿಂದ ನರಳುತ್ತಿದ್ದ ಎನ್ನಲಾಗಿದೆ.
ಈತ ಮನೆ ಬಳಿಯ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ ಎಂದು ತಂದೆ ನಾಗೇಶ ನಾಯ್ಕ ತಿಳಿಸಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.