ಕರ್ನಾಟಕ

karnataka

ETV Bharat / state

ಸಿದ್ದಾಪುರದಲ್ಲಿ ಭಾರೀ ಭೂ ಕುಸಿತ: ಆತಂಕದಲ್ಲಿ ಜನತೆ - ಭಾರೀ ಮಳೆ

ಭಾರೀ ಮಳೆಗೆ ಇಲ್ಲಿನ ಭೂಮಿ ನಿಧಾನವಾಗಿ ಬಾಯ್ತೆರೆಯಲು ಆರಂಭಿಸಿದ್ದು, ಮಳೆಗೆ ಸುಮಾರು 4 ಎಕರೆಯಷ್ಟು ಭೂಮಿ ಬಾಯ್ತೆರೆದಿದೆ.

ಸಿದ್ದಾಪುರದಲ್ಲಿ ಭೂ ಕುಸಿತ: ಆತಂಕಕ್ಕೀಡಾದ ಜನತೆ

By

Published : Aug 12, 2019, 10:49 PM IST

ಶಿರಸಿ:ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಎಲ್ಲೆಡೆ ಅವಾಂತರವನ್ನ ಸೃಷ್ಟಿಸಿದ್ದು, ಕೆಲವರು ಮನೆ, ತೋಟಗಳನ್ನ ಕಳೆದುಕೊಂಡಿದ್ದಾರೆ. ಇನ್ನು ಹಲವರ ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮಳೆಗೆ ಸುಮಾರು 4 ಎಕರೆಯಷ್ಟು ಭೂಮಿ ಬಾಯ್ತೆರೆದಿರುವ ಘಟನೆ ಜಿಲ್ಲೆಯ ಸಿದ್ದಾಪುರದ ಭಾನ್ಕುಳಿ ಸಮೀಪ ನಡೆದಿದೆ.

ಸಿದ್ದಾಪುರದಲ್ಲಿ ಭೂ ಕುಸಿತ: ಆತಂಕಕ್ಕೀಡಾದ ಜನತೆ

ಹೌದು, ಭಾರೀ ಮಳೆಗೆ ಇಲ್ಲಿನ ಭೂಮಿ ನಿಧಾನವಾಗಿ ಬಾಯ್ತೆರೆಯಲು ಆರಂಭಿಸಿದೆ. ದೊಡ್ಡದಾಗಿ ಶಬ್ದ ಬಂದು ಭೂಮಿ ನಿಧಾನವಾಗಿ ಕೆಳಗಡೆ ಇಳಿದಿದೆ. ಸುಮಾರು 4ರಿಂದ 5 ಎಕರೆಯಷ್ಟು ಭೂಮಿ ಈಗಾಗಲೇ ಕುಸಿದಿದ್ದು, ಇದರಿಂದಾಗಿ 1 ಮನೆ ಕೂಡ ಅಪಾಯದ ಅಂಚಿನಲ್ಲಿದೆ.

1982ರಲ್ಲಿ ಒಂದು ಬಾರಿ ಈ ಪ್ರದೇಶದಲ್ಲಿ ಭೂಕಂಪವಾದಂತಹ ಸಂದರ್ಭದಲ್ಲಿ ಸ್ವಲ್ಪ ತೊಂದರೆಯಾಗಿತ್ತು. ಆದರೆ ಇಲ್ಲಿವರೆಗೆ ಇಷ್ಟೊಂದು ಭೂಮಿ ಕುಸಿದಿರೋದನ್ನ ನಾವ್ಯಾವತ್ತೂ ನೋಡಿಲ್ಲ ಎನ್ನುತ್ತಾರೆ ಸ್ಥಳೀಯರು. ಅಲ್ಲದೇ ರಾಜ್ಯದ ವಿವಿಧ ಕಡೆಗಳಲ್ಲಿ ಭೂ ಕುಸಿತದಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಜಿಲ್ಲೆಯಲ್ಲೂ ಈಗ ಆತಂಕ ವ್ಯಕ್ತವಾಗಿದೆ.

ABOUT THE AUTHOR

...view details