ಕಾರವಾರ: ಕೊರೊನಾ ಅಬ್ಬರ ಹೆಚ್ಚಾಗುತ್ತಿದ್ದಂತೆ ಕೋವಿಡ್ ಲಸಿಕೆ ಪಡೆಯುವವರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಳೆ ನಡುವೆಯೂ ಜನರು ವ್ಯಾಕ್ಸಿನ್ಗಾಗಿ ಸಾಲುಗಟ್ಟಿ ನಿಂತಿರುವ ಘಟನೆ ನಡೆದಿದೆ.
ಕಾರವಾರ: ಮಳೆ ನಡುವೆಯೂ ಲಸಿಕೆ ಪಡೆಯಲು ಮುಗ್ಗಿಬಿದ್ದ ಜನ! - ಕಾರವಾರದಲ್ಲಿ ಮಳೆ ನಡುವೆಯೂ ಲಸಿಕೆ ಪಡೆಯಲು ಮುಗ್ಗಿಬಿದ್ದ ಜನ
ಉತ್ತರ ಕನ್ನಡ ಜಿಲ್ಲೆಯಲ್ಲಿ ಅದರಲ್ಲಿಯೂ ಕುಮಟಾ ಸುತ್ತಮುತ್ತಲಿನ ಭಾಗದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದು, ಈ ಕಾರಣದಿಂದ ಇತ್ತೀಚೆಗೆ ಲಸಿಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

ಮಳೆ ನಡುವೆಯೂ ಲಸಿಕೆ ಪಡೆಯಲು ಮುಗ್ಗಿಬಿದ್ದ ಜನ
ಮಳೆ ನಡುವೆಯೂ ಲಸಿಕೆ ಪಡೆಯಲು ಮುಗ್ಗಿಬಿದ್ದ ಜನ
45 ವರ್ಷ ಮೇಲ್ಪಟ್ಟವರಿಗೆ ಮೊದಲ ಹಾಗೂ ಎರಡನೇ ಬಾರಿಗೆ ಲಸಿಕೆ ನೀಡಲಾಗುತ್ತಿದ್ದು, ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿತ್ಯವೂ ಜನ ವ್ಯಾಕ್ಸಿನೇಷನ್ ಪಡೆದುಕೊಳ್ಳಲು ಆಗಮಿಸುತ್ತಿದ್ದಾರೆ. ಮಾತ್ರವಲ್ಲದೆ 18 ವರ್ಷ ಮೇಲ್ಪಟ್ಟವರು ಕೂಡ ಆಗಮಿಸುತ್ತಿದ್ದು, ಸದ್ಯ ಅಂತವರಿಗೆ ಅವಕಾಶ ಇಲ್ಲದ ಕಾರಣ ವಾಪಸ್ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.
ಓದಿ : ಕರ್ನಾಟಕದಲ್ಲಿ ಕೊರೊನಾ ಸಾವಿನ "ಮನೆ": ಆಸ್ಪತ್ರೆಗೆ ಬರುವ ಮುನ್ನವೇ ಹಾರಿ ಹೋಗುತ್ತಿದೆ ಪ್ರಾಣಪಕ್ಷಿ!