ಕರ್ನಾಟಕ

karnataka

ಸ್ಥಿರ ಸರ್ಕಾರ ಇರಲೆಂದು ಬಿಜೆಪಿಗೆ ಮತ ನೀಡಿದ್ದಾರೆ.. ಮಾಜಿ ಸಚಿವ ದೇಶಪಾಂಡೆ

By

Published : Dec 10, 2019, 10:30 PM IST

ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಯನ್ನು ಗೆಲ್ಲಿಸಿರುವುದು ರಾಜ್ಯದಲ್ಲಿ ಸ್ಥಿರ ಸರ್ಕಾರ ಇರಲಿ ಎಂದು. ಅದು ಬಿಟ್ಟರೆ ಬೇರಾವ ಕಾರಣಕ್ಕೂ ಅಲ್ಲ ಎಂದು ಮಾಜಿ ಸಚಿವ ಆರ್‌ ವಿ ದೇಶಪಾಂಡೆ ಹೇಳಿದ್ದಾರೆ.

Deshapande
ಮಾಜಿ ಸಚಿವ ಆರ್​.ವಿ.ದೇಶಪಾಂಡೆ ಹೇಳಿಕೆ

ಶಿರಸಿ:ರಾಜ್ಯದಲ್ಲಿ ಸ್ಥಿರ ಸರ್ಕಾರವನ್ನು ಆಡಳಿತಕ್ಕೆ ತರಬೇಕು ಎಂಬ ಉದ್ದೇಶದಿಂದ ಮತದಾರರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ ಎಂದು ಮಾಜಿ ಸಚಿವ ಆರ್‌ ವಿ ದೇಶಪಾಂಡೆ ಉಪ ಚುನಾವಣೆಯ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ್ದಾರೆ.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ 2018ರ ಚುನಾವಣೆ ನಂತರ ಅಸ್ಥಿರ ಸರ್ಕಾರ ಬಂದಿತ್ತು. ನಂತರ ಯಡಿಯೂರಪ್ಪ ಸರ್ಕಾರಕ್ಕೂ ಅಸ್ಥಿರತೆ ಇತ್ತು. ಆದ ಕಾರಣ ಸ್ಥಿರ ಸರ್ಕಾರ ಅಗತ್ಯವಿದೆ ಎಂದು ಯಡಿಯೂರಪ್ಪ ಚುನಾವಣಾ ಪ್ರಚಾರದ ಭಾಷಣದಲ್ಲಿ ಹೇಳಿದ್ದರು. ಇದರಿಂದ ಜನರೂ ಸಹ ರಾಜ್ಯದಲ್ಲಿ ಅಸ್ಥಿರತೆ ಇರಬಾರದು ಎಂದು ಸ್ಥಿರತೆಗಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದರು.

ಮಾಜಿ ಸಚಿವ ಆರ್ ವಿ ದೇಶಪಾಂಡೆ..

ಉಪ ಚುನಾವಣೆಯಲ್ಲಿ ಆಯ್ಕೆಯಾದರೆ ಅಭ್ಯರ್ಥಿಗಳನ್ನು ಮಂತ್ರಿ ಮಾಡುತ್ತೇನೆ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಇದರಿಂದ ನಮ್ಮ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎಂದು ಭಾವಿಸಿ ಮತದಾರರು ಬಿಜೆಪಿಗೆ ಮತ ಚಲಾವಣೆ ಮಾಡಿದ್ದಾರೆ ಎಂದರು.

ABOUT THE AUTHOR

...view details