ಕರ್ನಾಟಕ

karnataka

ETV Bharat / state

ಸ್ವಕ್ಷೇತ್ರದತ್ತ ಮುಖ ಮಾಡಿದ ಅತೃಪ್ತ ಶಾಸಕ; ಅಸಮಾಧಾನ‌ ಹೊರಹಾಕಿದ ಕ್ಷೇತ್ರದ ಜನತೆ - ಅತೃಪ್ತ ಶಾಸಕ

ರಾಜ್ಯದಲ್ಲಿ ಬಿಜೆಪಿ‌ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ಮೊನ್ನೆ ದಿಢೀರ್ ಎಂದು ಕ್ಷೇತ್ರಕ್ಕೆ ಮರಳಿ ಆಶ್ಚರ್ಯ ಉಂಟು ಮಾಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಯಲ್ಲಾಪುರ ಕ್ಷೇತ್ರದ ಜನರು ಹೆಸರಿಗಷ್ಟೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವ ಕ್ಷೇತ್ರದತ್ತ ಮುಖ ಮಾಡಿದ ಅತೃಪ್ತ ಶಾಸಕ.. ಅಸಮಧಾನ‌ ಹೊರಹಾಕಿದ ಕ್ಷೇತ್ರದ ಜನತೆ

By

Published : Jul 27, 2019, 11:56 PM IST

ಶಿರಸಿ: ರಾಜ್ಯ ರಾಜಕಾರಣದ ಗದ್ದಲದಲ್ಲಿ ಅಂತೂ ಬಿಜೆಪಿ‌ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಅತ್ತ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ಹೊತ್ತಿನಲ್ಲೇ ಕಾಣೆಯಾಗಿದ್ದ ಶಾಸಕರು ತಮ್ಮ ಸ್ವಕ್ಷೇತ್ರದತ್ತ ಮುಖ ಮಾಡಿದ್ದಾರೆ. ಆದರೆ ಜನಸಾಮಾನ್ಯರಿಗೆ ಲಭ್ಯವಾಗದೇ ಕೇವಲ ಹೆಸರಿಗಷ್ಟೆ ಮುಖ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಸ್ವ ಕ್ಷೇತ್ರದತ್ತ ಮುಖ ಮಾಡಿದ ಅತೃಪ್ತ ಶಾಸಕ.. ಅಸಮಾಧಾನ‌ ಹೊರಹಾಕಿದ ಕ್ಷೇತ್ರದ ಜನತೆ

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಶಾಸಕ ಶಿವರಾಮ್ ಹೆಬ್ಬಾರ್ ಮೊನ್ನೆ ದಿಢೀರ್ ಎಂದು ಕ್ಷೇತ್ರಕ್ಕೆ ಮರಳಿ ಆಶ್ಚರ್ಯ ಉಂಟು ಮಾಡಿದ್ದರೂ ಅವರ ಈ ನಡೆಗೆ ಜನಸಾಮಾನ್ಯರಿಂದ ಅಸಮಾಧಾನ‌ ವ್ಯಕ್ತವಾಗಿದೆ.

ಇದನ್ನು ಓದಿ: ಸ್ವಕ್ಷೇತ್ರದಲ್ಲಿ ಶಾಸಕ ಶಿವರಾಮ ಹೆಬ್ಬಾರ್​​​: ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ

ಅದೆಷ್ಟೋ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಿಲ್ಲದೆ ಕಂಗಾಲಾಗಿದ್ದ ಮತದಾರರಿಗೆ ತಮ್ಮ ನಾಯಕರ ಧಿಡೀರ್ ಭೇಟಿ ಕುತೂಹಲದ ಜೊತೆಗೆ ಶಾಕ್ ನೀಡಿದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮನೆಗೆ ಬರುವ ಕುರಿತು ಕುಟುಂಬಕ್ಕೆ ಹಾಗೂ ಆಪ್ತ ವಲಯಕ್ಕೆ ತಿಳಿದಿತ್ತು. ಆದರೆ ಜನಸಾಮಾನ್ಯರಿಗೆ ಸಿಗುವ ಬದಲು ಹೆಸರಿಗಷ್ಟೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮತ್ತೆ ಕಾಣೆಯಾಗಿರುವುದಕ್ಕೆ ಕ್ಷೇತ್ರದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಕ್ಷೇತ್ರದಲ್ಲಿ ಶಾಸಕರಿಲ್ಲದೆ ಯಾವುದೇ ಅಭಿವೃದ್ದಿ ಕಾರ್ಯವಾಗುತ್ತಿಲ್ಲ. ಇನ್ನು ಕೆಲ ಅಧಿಕಾರಿಗಳು ಜನರ ಸಮಸ್ಯೆಗೆ ಸೂಕ್ತ ಪರಿಹಾರ ನೀಡುತ್ತಿಲ್ಲ. ಕ್ಷೇತ್ರದಲ್ಲಿ ಜಾರಿಗೆ ತಂದಿರೋ ಹಲವು ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಮತದಾನ ಮಾಡಿ ಚುನಾಯಿಸಿದ ಚುನಾಯಿತ ಪ್ರತಿನಿಧಿ ರಾಜೀನಾಮೆ ನೀಡಿದ್ದಾರೆ.‌ ಆದರೆ ಅವರು ರಾಜೀನಾಮೆ ನೀಡೋ ಮುಂಚಿತವಾಗಿ ಮತದಾರರ ಅಭಿಪ್ರಾಯ ಕೇಳಬಹುದಿತ್ತು. ಆದರೆ ನಮ್ಮ ನಾಯಕ ಎಂದುಕೊಂಡ ಶಾಸಕ ಶಿವರಾಮ್ ಹೆಬ್ಬಾರ್ ನಮಗೆ ಬೇಸರ ತಂದಿದ್ದಾರೆ ಅಂತಾ ಯಲ್ಲಾಪುರ ಕ್ಷೇತ್ರದ ಜನರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details