ಕಾರವಾರ :ಕಾಳಿ ನದಿ ನೀರನ್ನು ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳಿಗೆ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಜೊಯಿಡಾ ತಾಲೂಕನ್ನು ಬಂದ್ ಮಾಡಿ ವಿವಿಧ ಸಂಘಟನೆಗಳು ಸೇರಿದಂತೆ ಸಾರ್ವಜನಿಕರಿಂದ ಪ್ರತಿಭಟನೆ ನಡೆಸಲಾಗಿದೆ.
ಕಾಳಿ ಬ್ರಿಗೇಡ್ ಸಂಘಟನೆ ಕರೆ ನೀಡಿದ್ದ ಜೊಯಿಡಾ ಬಂದ್ಗೆ ತಾಲೂಕಿನಾದ್ಯಂತ ಸ್ಪಂದನೆ ದೊರೆತಿದೆ. ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತbeಗಿ ಬಂದ್ ಮಾಡಲಾಗಿದೆ. ವಾಹನಗಳ ಸಂಚಾರ ಎಂದಿನಂತಿದ್ದರೂ ಅಂಗಡಿ-ಮುಂಗಟ್ಟುಗಳು ತೆರೆಯದ ಕಾರಣ ಜನ ಸಂಚಾರ ಕೂಡ ವಿರಳವಾಗಿದೆ.
ಜೊಯಿಡಾದ ಡಿಗ್ಗಿಯಲ್ಲಿ ಹುಟ್ಟುವ ಕಾಳಿ ನದಿಯು ಪಶ್ಚಿಮಾಭಿಮುಖವಾಗಿ ಕಾರವಾರಕ್ಕೆ ಹರಿದು, ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಸುಮಾರು 184 ಕಿ.ಮೀ. ದೂರದವರೆಗೆ ಹರಿಯುವ ಕಾಳಿ, ತನ್ನ ಹರಿವಿನ ಮಾರ್ಗದುದ್ದಕ್ಕೂ ಲಕ್ಷಾಂತರ ನಿವಾಸಿಗಳಿಗೆ ಜೀವನದಿಯಾಗಿದೆ.
ಕುಡಿಯಲು, ದಿನಬಳಕೆಗೆ, ವ್ಯವಹಾರ-ಕಸುಬಿಗೆ ಕಾಳಿ ಬಳಕೆಯಾಗುತ್ತಾಳೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹರಿದು ಬರುವ ಕಾಳಿ ಸಕಲ ಜೀವಜಂತುಗಳಿಗೂ ಆಶ್ರಯದಾಯಿ.