ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪ್ರಚಾರ ನಡೆಸುತ್ತಿದ್ದ ವೇಳೆ ಮಳೆ ಬಂದು ಪೆಂಡಾಲ್ ಕುಸಿದು ಬಿದ್ದ ಘಟನೆ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.
ಅಸ್ನೋಟಿಕರ್ ಪ್ರಚಾರದ ವೇಳೆ ಕುಸಿದ ಪೆಂಡಾಲ್, ಕಾರ್ಯಕರ್ತರ ಮೇಲೆ ಜೇನು ದಾಳಿ - undefined
ಹತ್ತಿರದ ಮರದಲ್ಲಿದ್ದ ಜೇನು ಹುಳುಗಳು ಕಾರ್ಯಕರ್ತರ ಮೇಲೆ ಎರಗಿದ್ದು, ಅವುಗಳಿಂದ ತಪ್ಪಿಸಿಕೊಳ್ಳಲು ಸೇರಿದ್ದ ಜನರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಸ್ವತಃ ಅಭ್ಯರ್ಥಿ ಅಸ್ನೋಟಿಕರ್ ಕಾರುಹತ್ತಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಹತ್ತಿರದ ಮರದಲ್ಲಿದ್ದ ಜೇನು ಹುಳುಗಳು ಕಾರ್ಯಕರ್ತರ ಮೇಲೆ ಎರಗಿದ್ದು, ಹುಳುಗಳಿಂದ ತಪ್ಪಿಸಿಕೊಳ್ಳಲು ಸೇರಿದ್ದ ಜನರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಸ್ವತಃ ಅಭ್ಯರ್ಥಿ ಅಸ್ನೋಟಿಕರ್ ಕಾರುಹತ್ತಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಮುಂಡಗೋಡ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ ಅವರಿಗೆ ಹೆಜ್ಜೇನುಗಳು ಕಡಿದಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ಜೇನು ನೊಣದ ದಾಳಿಗೆ ತುತ್ತಾಗಿದ್ದು, ಘಟನೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ವಿರೋಧಿಗಳು ಬೇಕೆಂದೇ ಜೇನು ಗೂಡಿಗೆ ಕಲ್ಲು ಹೊಡೆದಿದ್ದಾರೆ ಎಂಬುದು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಆರೋಪ ಮಾಡುತ್ತಿದ್ದಾರೆ.