ಕರ್ನಾಟಕ

karnataka

ETV Bharat / state

ಭಟ್ಕಳ ಪುರಸಭೆಯಿಂದ ಮಾಸ್ಕ್ ಹಾಕದವರಿಗೆ ದಂಡದ ಜೊತೆಗೆ ಉಚಿತ ಮಾಸ್ಕ್ ವಿತರಣೆ.. - ಉಚಿತ ಮಾಸ್ಕ್ ವಿತರಣೆ

ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹಾಗೂ ಅವರ ಸಿಬ್ಬಂದಿ ಎರಡು ದಿನದಿಂದ ಮಾಸ್ಕ ಇಲ್ಲದೆ ಓಡಾಡುವ ಜನರಿಗೆ ದಂಡ ಹಾಕುವ ಕಾರ್ಯಾಚರಣೆಗೆ ಇಳಿದಿದೆ. ಮಾಸ್ಕ್ ಧರಿಸದೆ ರಸ್ತೆಯಲ್ಲಿ ಸುತ್ತಾಡುವವರನ್ನು ಹಿಡಿದು ತಲಾ 100 ರೂ. ದಂಡ ಹಾಕಲಾಗಿದೆ.

non-mask people
ಭಟ್ಕಳ

By

Published : May 9, 2020, 3:39 PM IST

ಭಟ್ಕಳ :ಸರ್ಕಾರದ ಆದೇಶದಂತೆ ಕೊರೊನಾ ಕಡಿವಾಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ತಾಲೂಕಿನಲ್ಲಿ ಅನಗತ್ಯವಾಗಿ ರಸ್ತೆಯಲ್ಲಿ ಓಡಾಡಿದ 8 ಮಂದಿಯ ಮೇಲೆ ತಲಾ ₹100ನಂತೆ ಪುರಸಭೆ ದಂಡ ವಿಧಿಸಿದೆ.

ಭಟ್ಕಳ ಪುರಸಭೆ ಅಧಿಕಾರಿಗಳಿಂದ ದಂಡ..

ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಸೋಜಿಯಾ ಸೋಮನ್ ಹಾಗೂ ಅವರ ಸಿಬ್ಬಂದಿ ಎರಡು ದಿನದಿಂದ ಮಾಸ್ಕ ಇಲ್ಲದೆ ಓಡಾಡುವ ಜನರಿಗೆ ದಂಡ ಹಾಕುವ ಕಾರ್ಯಾಚರಣೆಗೆ ಇಳಿದಿದೆ. ಮಾಸ್ಕ್ ಧರಿಸದೆ ರಸ್ತೆಯಲ್ಲಿ ಸುತ್ತಾಡುವವರನ್ನು ಹಿಡಿದು ತಲಾ 100 ರೂ. ದಂಡ ಹಾಕಲಾಗಿದೆ.

ಮೊದಲ ದಿನದಂದು ಪಟ್ಟಣದ ರಂಗೀಕಟ್ಟೆ, ತಾಲೂಕು ಪಂಚಾಯತ್ ಕಾರ್ಯಾಲಯ ಎದುರು ಹಾಗೂ ಮುಖ್ಯ ರಸ್ತೆಯಲ್ಲಿ ನಿಂತುಕೊಂಡು ಮಾಸ್ಕ್ ಧರಿಸದೆ ಇರುವವರಿಗೆ ದಂಡ ವಿಧಿಸಿದ್ದಲ್ಲದೆ, ಅವರಿಗೆ ಒಂದೊಂದು ಮಾಸ್ಕ್‌ನ ಉಚಿತವಾಗಿ ನೀಡಿ ಕಳುಹಿಸಿದರು. 2ನೇ ದಿನದಂದು ಮಣ್ಕುಳಿ, ರಘುನಾಥ ರಸ್ತೆ, ಚೌಥನಿ, ಹೂವಿನಪೇಟೆ ರಸ್ತೆಯಲ್ಲಿ ಕಾರ್ಯಾಚರಣೆಗಿಳಿದು ದಂಡ ವಿಧಿಸಿ ಉಚಿತ ಮಾಸ್ಕ್ ವಿತರಿಸಿದ್ದಾರೆ.

ABOUT THE AUTHOR

...view details