ಕಾರವಾರ: ಹೊನ್ನಾವರ ತಾಲೂಕಿನ ಕೊಪ್ಪದಮಕ್ಕಿ ಕಡಲ ತೀರದಲ್ಲಿ ನಾಲ್ಕು ದಿನಗಳ ಹಿಂದೆ ಶವವಾಗಿ ಪತ್ತೆಯಾಗಿದ್ದ ಮೂವರ ಗುರುತು ಕೊನೆಗೂ ಪತ್ತೆಯಾಗಿದೆ. ಮೃತರನ್ನು ಬೆಂಗಳೂರಿನ ಯಶವಂತಪುರದ ಮೀನಾ ನಾಗರಾಜ್ (37), ಅವರ ಪುತ್ರಿಯರಾದ ಮೋನಿಶಾ (15) ಹಾಗೂ ಕೋಮಲಾ (12) ಎಂದು ಗುರುತಿಸಲಾಗಿದೆ.
ಸಮುದ್ರ ತೀರದಲ್ಲಿ ಸಿಕ್ಕ 3 ಮೃತದೇಹಗಳ ಗುರುತು ಕೊನೆಗೂ ಪತ್ತೆ... ಕೊಲೆ ಆರೋಪ - kannada news
ನಾಲ್ಕು ದಿನಗಳ ಹಿಂದೆ ಕೊಪ್ಪದಮಕ್ಕಿ ಕಡಲ ತೀರದಲ್ಲಿ ಪತ್ತೆಯಾಗಿದ್ದ 3 ಶವಗಳ ಗುರುತು ಕೊನೆಗೂ ಪತ್ತೆಯಾಗಿದೆ.
![ಸಮುದ್ರ ತೀರದಲ್ಲಿ ಸಿಕ್ಕ 3 ಮೃತದೇಹಗಳ ಗುರುತು ಕೊನೆಗೂ ಪತ್ತೆ... ಕೊಲೆ ಆರೋಪ](https://etvbharatimages.akamaized.net/etvbharat/prod-images/768-512-3302665-thumbnail-3x2-murder.jpg)
ಕೊನೆಗೂ ಪತ್ತೆಯಾದ ಮೂವರು ಮೃತದೇಹಗಳ ಗುರುತು
ಮೃತ ಮೀನಾ ಸಹೋದರ ಬೆಂಗಳೂರಿನ ಬಶವೇಶ್ವರ ನಗರದ ಜಗದೀಶ್ ಎಂಬುವರು ಮೃತದೇಹಗಳ ಗುರುತು ಪತ್ತೆ ಹಚ್ಚಿ ಊರಿಗೆ ಒಯ್ದಿದ್ದಾರೆ. ಅಲ್ಲದೆ ಅಕ್ಕನಿಗೆ ಬಾವ ನಾಗರಾಜ್ ಚಿತ್ರ ಹಿಂಸೆ ನೀಡುತ್ತಿದ್ದ. ಆಕೆ ಹಾಗೂ ಮಕ್ಕಳನ್ನು ಇಲ್ಲಿ ಕರೆದುಕೊಂಡು ಬಂದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಹೊನ್ನಾವರದ ಮಂಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.