ಕರ್ನಾಟಕ

karnataka

By

Published : Oct 14, 2019, 9:34 AM IST

Updated : Oct 14, 2019, 9:41 AM IST

ETV Bharat / state

ಹೊನ್ನಾವರ ಬಳಿ ಸಾರಿಗೆ ಬಸ್​ ಅಪಘಾತ: ಅಪಾಯದಿಂದ ಪಾರಾದ ಪ್ರಯಾಣಿಕರು

ಬೆಂಗಳೂರುನಿಂದ ಹೊನ್ನಾವರಕ್ಕೆ ತೆರಳುತ್ತಿದ್ದ ಐರಾವತ ಬಸ್​​​ ಹೊನ್ನಾವರ ತಾಲೂಕಿನ ಬಾಳೆಗದ್ದೆ ತಿರುವಿನಲ್ಲಿ ರಸ್ತೆ ಪಕ್ಕದ ಬ್ಯಾರಿಕೇಡ್​​ಗೆ ಬಡಿದಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಆಗಿಲ್ಲ.

ಬಾಳೆಗದ್ದೆ ತಿರುವಿನಲ್ಲಿ ಅಪಘಾತ

ಭಟ್ಕಳ:ಬೆಂಗಳೂರಿನಿಂದ ಹೊನ್ನಾವರದ ಕಡೆ ಪ್ರಯಾಣಿಕರನ್ನು ಕರೆತರುತ್ತಿದ್ದ ಸಾರಿಗೆ ಸಂಸ್ಥೆಯ ಐರಾವತ ಬಸ್ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ಬಾಳೆಗದ್ದೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬ್ಯಾರಿಕೇಡ್​ಗೆ ಬಡಿದಿದ್ದು, ಬಸ್​ನಲ್ಲಿದ್ದ ಪ್ರಯಾಣಿಕರು ಸೇಫ್​ ಆಗಿದ್ದಾರೆ.

ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು, ತಿರುವಿನಲ್ಲಿ ಬಸ್​ ಚಾಲಕನ ನಿಯಂತ್ರಣಕ್ಕೆ ಸಿಗದ ಕಾರಣದಿಂದಾಗಿ ಈ ದುರ್ಘಟನೆ ಸಂಭವಿಸಿದ್ದು, ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.

ಸಾರಿಗೆ ಇಲಾಖೆ ಬದಲಿ ವ್ಯವಸ್ಥೆ ಮೂಲಕ ಪ್ರಯಾಣಿಕರನ್ನು ಹೊನ್ನಾವರಕ್ಕೆ ಕರೆ ತರಲಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Oct 14, 2019, 9:41 AM IST

ABOUT THE AUTHOR

...view details