ಕಾರವಾರ: ಸೀಳು ತುಟಿಯ ಹಸುಗೂಸೊಂದನ್ನು ಖಾಲಿ ಬಾಕ್ಸ್‌ನಲ್ಲಿ ಇಟ್ಟು ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ತಾಲೂಕಿನ ತ್ಯಾರ್ಸಿ-ಕಡಕೇರಿ ತಿರುವಿನ ಹತ್ತಿರದ ಗುಡ್ಡೆಕೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ಮಗು ಬಿಸಾಕಿರುವುದನ್ನು ಗಮನಿಸಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮಹಿಳಾ ಮತ್ತು ಶಿಶು ಕಲ್ಯಾಣ ಅಧಿಕಾರಿ ಪೂರ್ಣಿಮಾ ಆರ್. ದೊಡ್ಡನಿ ಅವರನ್ನು ಸಂಪರ್ಕಿಸಿದ್ದಾರೆ. ಮಗುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ತಂದು ಹಾಲುಣಿಸಿ ಉಪಚರಿಸಲಾಗಿದೆ.