ಕರ್ನಾಟಕ

karnataka

ETV Bharat / state

ಭಟ್ಕಳದಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನ ಮಹಿಳೆಯ ಪತಿ ಹೃದಯಾಘಾತದಿಂದ ಸಾವು - Javed Mohiddin Ruknuddin death

ಬಂಧನಕ್ಕೊಳಗಾದ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್ ಎಂಬಾಕೆಯ ಪತಿ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Pakistani lady husband died by heart attack in Bhatkal
ಭಟ್ಕಳದಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನಿ ಪ್ರಜೆಯ ಪತಿ ಹೃದಯಾಘಾತದಿಂದ ಸಾವು

By

Published : Apr 22, 2022, 3:09 PM IST

ಭಟ್ಕಳ (ಉತ್ತರ ಕನ್ನಡ): ಕಳೆದ ವರ್ಷ ಭಟ್ಕಳದಲ್ಲಿ ಬಂಧನಕ್ಕೊಳಗಾದ ಪಾಕಿಸ್ತಾನ ಪ್ರಜೆ ಖತೀಜಾ ಮೆಹ್ರೀನ್ ಎಂಬಾಕೆಯ ಪತಿ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಭಟ್ಕಳದಲ್ಲಿ 2014ರಲ್ಲಿ ಖತೀಜಾ ಮೆಹ್ರೀನ್ ಕಾನೂನುಬಾಹಿರವಾಗಿ ಭಾರತದೊಳಗೆ ನುಸುಳಿ ಅನಧಿಕೃತವಾಗಿ ಭಟ್ಕಳದ ನವಾಯತ್ ಕಾಲೋನಿಯ ವೈಟ್ ಹೌಸ್ ಮನೆಯಲ್ಲಿ ವಾಸವಾಗಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಭಟ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಳೆದ ವರ್ಷ ಜೂ.9 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಂಧಿಸಿದ್ಧರು.

ಇದನ್ನೂ ಓದಿ:ದಿಂಗಾಲೇಶ್ವರ ಶ್ರೀಗಳಿಗೆ ಪೊಲೀಸ್ ಧಮ್ಕಿ ವಿಚಾರ: ದೂರು ಕೊಟ್ಟರೆ ಉನ್ನತ ತನಿಖೆ- ಸಿಎಂ ಬೊಮ್ಮಾಯಿ

ಪತಿ ಭಟ್ಕಳ ನವಾಯತ್ ಕಾಲೋನಿ ನಿವಾಸಿಯಾದ ಜಾವೇದ್ ಮೋಹಿದ್ದಿನ್ ರುಕ್ನುದ್ದಿನ್ ಆರೋಗ್ಯದಲ್ಲಿ ನಿನ್ನೆ ಏರುಪೇರಾಗಿದ್ದು ಮಂಗಳೂರಿನ ಇಂಡಿಯನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗುವಿದೆ.

ABOUT THE AUTHOR

...view details