ಕರ್ನಾಟಕ

karnataka

ETV Bharat / state

ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರ ಮಟ್ಟದ ಕಲಾವಿದರ ಚಿತ್ರಕಲಾ ಪ್ರದರ್ಶನ! - Painting Exhibition In Puttur

ಸಾಮಾನ್ಯವಾಗಿ ಖ್ಯಾತ ಕಲಾವಿದರಿಂದ ರೂಪ ಪಡೆದ ಚಿತ್ರಕಲಾ ಪ್ರದರ್ಶನಗಳು ಮಹಾನಗರಗಳಲ್ಲಿ ನಡೆಯುತ್ತವೆ. ಆದರೆ, ಇದಕ್ಕೆ ಭಿನ್ನವಾಗಿ ರಾಷ್ತ್ರಮಟ್ಟದ ಕಲಾವಿದರ ಚಿತ್ರಕಲಾ ಪ್ರದರ್ಶನ ತಾಲೂಕಿನ ಆರ್ಯಾಪು ಗ್ರಾಮದ ಪರ್ಪುಂಜದಲ್ಲಿ ಆಯೋಜನೆಗೊಂಡು ಗಮನಸೆಳೆಯುತ್ತಿದೆ.

Painting Exhibition
ಗ್ರಾಮೀಣ ಪ್ರದೇಶದಲ್ಲಿ ರಾಷ್ಟ ಮಟ್ಟದ ಕಲಾವಿದರ ಚಿತ್ರಕಲಾ ಪ್ರದರ್ಶನ

By

Published : Dec 31, 2019, 5:23 PM IST

ಪುತ್ತೂರು: ಸಾಮಾನ್ಯವಾಗಿ ಖ್ಯಾತ ಕಲಾವಿದರಿಂದ ರೂಪ ಪಡೆದ ಚಿತ್ರಕಲಾ ಪ್ರದರ್ಶನಗಳು ಮಹಾನಗರಗಳಲ್ಲಿ ನಡೆಯುತ್ತವೆ. ಆದರೆ, ಇದಕ್ಕೆ ಭಿನ್ನವಾಗಿ ರಾಷ್ತ್ರಮಟ್ಟದ ಕಲಾವಿದರ ಚಿತ್ರಕಲಾ ಪ್ರದರ್ಶನ ತಾಲೂಕಿನ ಆರ್ಯಾಪು ಗ್ರಾಮದ ಪರ್ಪುಂಜದಲ್ಲಿ ಆಯೋಜನೆಗೊಂಡು ಗಮನ ಸೆಳೆಯುತ್ತಿದೆ.

ಮಾಣಿ -ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿರುವ ಪರ್ಪುಂಜದ ಸೌಗಂಧಿಕಾ ನರ್ಸರಿಯ ಮಧ್ಯೆ ಇರುವ ಮನೆಯ ಟೆರೇಸ್‌ನಲ್ಲಿ ದೇಶದ ಖ್ಯಾತ ಕಲಾವಿದರ ಈ ಚಿತ್ರಕಲೆ ಹಾಗೂ ಕೊಲಾಜ್‌ಗಳ ಪ್ರದರ್ಶನವನ್ನು 'ಬಣ್ಣಗಳ ಪಯಣ' ಹೆಸರಿನಲ್ಲಿ ಡಿ.25 ರಿಂದ ಡಿ.31ರ ವರೆಗೆ ನಡೆಯಲಿದೆ.

ಖ್ಯಾತ ಕಲಾವಿದರಾದ ಅದಿತಿ ರಾಮನ್, ಭುವನೇಶ್ ಗೌಡ, ದೇವಿದಾಸ್ ಎಚ್. ಅಗಸೆ, ಗಿರಿಧರ ಖಾಸನೀಸ್, ಮಹೇಶ್ ಬಾಳಿಗ, ಮೋಹನ್ ಸೋನ, ಪುತ್ತೂರಿನವರೇ ಆದ ಓಬಯ್ಯ, ಪ್ರದೀಪ್ ಕುಮಾರ್ ಹಾಗೂ ಮೊದಲಾದವರ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಕಲಾವಿದರ ಚಿತ್ರಕಲಾ ಪ್ರದರ್ಶನ..

ಜಲವರ್ಣ, ತೈಲವರ್ಣ, ಕಾಷ್ಠಶಿಲ್ಪ ಮಾದರಿಯ ಚಿತ್ರಕಲೆಗಳು ಸೇರಿ ಒಟ್ಟು 18 ಚಿತ್ರ ಕಲೆಗಳನ್ನು ಇಲ್ಲಿ ಪ್ರದರ್ಶನಕ್ಕಿರಿಸಲಾಗಿದೆ. ಖ್ಯಾತ ಚಿತ್ರ ಕಲಾವಿದರು ಚಿತ್ರಿಸಿದ ವಿವಿಧ ವಸ್ತು ಸ್ಥಿತಿ, ಸಾಮಾಜಿಕ ವ್ಯವಸ್ಥೆ ಬಿಂಬಿಸುವ ಕಲ್ಪನೆಗಳ ಕಲೆ ಕಲಾಸಕ್ತರ ಗಮನಸೆಳೆಯುತ್ತಿದೆ. ಚಿತ್ರಕಲೆ ಹಾಗೂ ಕೊಲಾಜ್‌ಗಳ ಸಮೂಹ ಪ್ರದರ್ಶನದ ವೀಕ್ಷಣೆಗೆ ಬೆಳಗ್ಗಿನಿಂದ ಸಂಜೆ ತನಕ ಕಲಾಸಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಕಲೆ ಪಟ್ಟಣಕ್ಕೆ ಮಾತ್ರ ಸೀಮಿತಗೊಳ್ಳದೆ ಎಲ್ಲಾ ಆಸಕ್ತರನ್ನು ತಲುಪಿದಾಗ ಕಲೆ ಹಾಗೂ ಕಲಾವಿದನಿಗೂ ಗೌರವ ಸಿಗುತ್ತದೆ. ಪರ್ಪುಂಜದಂತಹ ಚಿಕ್ಕ ಊರಲ್ಲಿ ಸಹ ಇಂತಹ ಪ್ರದರ್ಶನ ಏರ್ಪಡಿಸಿರುವುದು ಖುಷಿ ನೀಡಿದೆ. ಈ ಕಾರಣದಿಂದ ಚಿತ್ರಕಲಾ ಪ್ರದರ್ಶನ ವೀಕ್ಷಿಸಲು ಬಂದಿದ್ದೇನೆ ಅಂತಾ ಚಿತ್ರ ಕಲಾವಿದ ನೇಮಿರಾಜ್ ಹೇಳಿದರು.

ABOUT THE AUTHOR

...view details