ಕಾರವಾರ: ಐದು ಗಂಟೆ ಕಳೆದರೂ ಬಾರದ ಫಲಿತಾಂಶದಿಂದ ರೊಚ್ಚಿಗೆದ್ದ ಸಾರ್ವಜನಿಕರು ಮತ ಏಣಿಕೆ ಕೇಂದ್ರದ ಎದುರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಕುಮಟಾದಲ್ಲಿ ನಡೆದಿದೆ.
ಐದು ಗಂಟೆ ಕಳೆದರೂ ಬಾರದ ಫಲಿತಾಂಶ: ಸ್ಥಳೀಯರ ಆಕ್ರೋಶ - Gram Panchayat Result
ಫಲಿತಾಂಶಕ್ಕಾಗಿ ಕಾದು ಕಾದು ಸುಸ್ತಾದ ಸಾರ್ವಜನಿಕರು ಮತ ಏಣಿಕೆ ಕೇಂದ್ರದ ಹೊರ ಭಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.
ಸ್ಥಳೀಯರ ಆಕ್ರೋಶ
ಕುಮಟಾದ ಡಾ.ಎ.ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಯುತ್ತಿದ್ದ ಮತ ಏಣಿಕೆ ವೇಳೆ ಹೊಲನಗದ್ದೆ ಗ್ರಾಮ ಪಂಚಾಯಿತಿಯ ಮತ ಏಣಿಕೆ ಕೂಡ ಆರಂಭಗೊಂಡಿತ್ತು. ಆದರೆ, ಮತ ಏಣಿಕೆ ಐದು ಗಂಟೆ ಕಳೆದರೂ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಮತ ಏಣಿಕೆ ಕೇಂದ್ರದ ಹೊರ ಭಾಗದಲ್ಲಿ ನೆರೆದಿದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿ.ಎಸ್. ಕಡಕಬಾವಿ, ಸಿಪಿಐ ಪರಮೇಶ್ವರ ಗುನಗಾ ಜನರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ.
Last Updated : Dec 30, 2020, 5:24 PM IST