ಕರ್ನಾಟಕ

karnataka

ETV Bharat / state

ಹೊನ್ನಾವರ ಮೂಲದ ವ್ಯಕ್ತಿಗೆ ಕೊರೊನಾ ದೃಢ: ಉ.ಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ ಏರಿಕೆ - ಹೊನ್ನಾವರದಲ್ಲಿ ಸೋಂಕಿತರ ಸಂಖ್ಯೆ 64 ಕ್ಕೆ ಏರಿಕೆ

ಹೊನ್ನಾವರದ ಕ್ವಾರಂಟೈನ್ ಕೇಂದ್ರದಲ್ಲಿದ್ದ 44 ವರ್ಷದ ವ್ಯಕ್ತಿಗೆ ಇಂದಿನ ಹೆಲ್ತ್ ಬುಲೆಟಿನ್​​ನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮೇ 12ರಂದು ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ ವ್ಯಕ್ತಿ ಹಾಗೂ ಆತನ ಕುಟುಂಬವನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಿ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿತ್ತು. ಅದರಂತೆ ಇಂದು ಸೋಂಕು ಇರುವುದು ದೃಢವಾಗಿದೆ.

one more positive case found in Honnavara
ಹೊನ್ನಾವರ ಮೂಲದ ವ್ಯಕ್ತಿಗೆ ಕೊರೊನಾ ಧೃಡ.

By

Published : May 22, 2020, 6:13 PM IST

Updated : May 22, 2020, 8:05 PM IST

ಕಾರವಾರ: ಹೊನ್ನಾವರದಲ್ಲಿ ಇಂದು ಮತ್ತೊಂದು ಕೊರೊನಾ ಸೋಂಕು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

ಹೊನ್ನಾವರದ ಕ್ವಾರಂಟೈನ್ ಕೇಂದ್ರದಲ್ಲಿದ್ದ 44 ವರ್ಷದ ವ್ಯಕ್ತಿಗೆ ಇಂದಿನ ಹೆಲ್ತ್ ಬುಲೆಟಿನ್​​ನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಮೇ 12ರಂದು ಮಹಾರಾಷ್ಟ್ರದಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದ ವ್ಯಕ್ತಿ ಹಾಗೂ ಆತನ ಕುಟುಂಬವನ್ನು ಕ್ವಾರಂಟೈನ್‌ ಕೇಂದ್ರದಲ್ಲಿ ಇರಿಸಿ ಗಂಟಲು ದ್ರವದ ಪರೀಕ್ಷೆ ನಡೆಸಲಾಗಿತ್ತು. ಅದರಂತೆ ಇಂದು ಸೋಂಕು ಇರುವುದು ದೃಢವಾಗಿದೆ.

ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 52ಕ್ಕೆ ಏರಿಕೆಯಾಗಿದ್ದು, 12 ಮಂದಿ ಗುಣಮುಖರಾದವರು ಸೇರಿ ಜಿಲ್ಲೆಯಲ್ಲಿ 64 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಂತಾಗಿದೆ.

Last Updated : May 22, 2020, 8:05 PM IST

ABOUT THE AUTHOR

...view details