ಕಾರವಾರ:ಉತ್ತರಕನ್ನಡ ಜಿಲ್ಲೆ ಕೊರೊನಾ ಮುಕ್ತವಾಯಿತು ಎಂದು ಜನ ನಿಟ್ಟುಸಿರು ಬಿಟ್ಟ ಬೆನ್ನಲ್ಲೆ, ಇಂದು ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಆದರೆ ಧೃಡಪಟ್ಟಿರುವುದು ಹೆಣ್ಣೊ, ಗಂಡೊ ಎಂಬುದು ಸ್ವತಃ ಜಿಲ್ಲಾಡಳಿತ ಕೂಡ ಗೊಂದಲಕ್ಕೆ ಸಿಲುಕಿದೆ.
ಉತ್ತರ ಕನ್ನಡದಲ್ಲಿ ಕೊರೊನಾ ಸೋಂಕು ... ಹೆಣ್ಣೊ, ಗಂಡೋ ಗೊಂದಲದಲ್ಲಿ ಅಧಿಕಾರಿಗಳು! - ಕೊರೊನಾ
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೊಂದು ಕೊರೊನಾ ಪ್ರಕರಣ ದೃಢಪಟ್ಟಿದೆ.
ಹೌದು, ಭಟ್ಕಳದಲ್ಲಿ 28 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ನಲ್ಲಿದೆ. ಆದರೆ ಭಟ್ಕಳ ಪಟ್ಟಣದಲ್ಲಿ 18 ವರ್ಷದ ಯುವತಿಯಲ್ಲಿ ಸೋಂಕು ಕಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಕೊರೊನಾ ಗುಣಮುಖರಾದವರನ್ನ ಕ್ವಾರಂಟೈನ್ ಮಾಡಿದ್ದ ಹೋಟೆಲ್ ಮಾಲೀಕನ ಪುತ್ರಿ ಎನ್ನಲಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ಸಂಬಂಧಿಕರೊಂದಿಗೆ ತೆರಳಿದ್ದರು. ಆದರೆ, ವಿದೇಶಕ್ಕೂ ಹೋಗದೇ, ಹೊರಗಿನವರ ಸಂಪರ್ಕವನ್ನು ಮಾಡದ ಯುವತಿಗೆ ಇದೀಗ ಆಸ್ಪತ್ರೆಯಿಂದಲೇ ಕೊರೊನಾ ಸೋಂಕು ತಗುಲಿರ ಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಜ್ವರ ಕಾಣಿಸಿಕೊಂಡ ಕಾರಣ ಯುವತಿಯನ್ನು ಕ್ವಾರಂಟೈನ್ ಮಾಡಿ ಬಳಿಕ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಧೃಡಪಟ್ಟಿರುವುದಾಗಿ ಹೇಳಲಾಗುತ್ತಿದೆ. ಆದರೆ ಇದೀಗ ಹೆಲ್ತ್ ಬುಲೆಟಿನ್ನಲ್ಲಿ 28 ವರ್ಷದ ಪುರುಷ ಎಂದು ಇದ್ದು, ಸ್ವತಃ ಅಧಿಕಾರಿಗಳು ಕೂಡ ಗೊಂದಲಕ್ಕೊಳಗಾಗಿದ್ದಾರೆ.