ಭಟ್ಕಳ :ನಗರದಲ್ಲಿ ಮತ್ತೊಂದು ಕೊವಿಡ್-19 ಸೋಂಕು ಪ್ರಕರಣ ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 8ಕ್ಕೇರಿದೆ. ರಾಜ್ಯದಲ್ಲಿ ಇದು 76ನೇ ಪ್ರಕರಣ.
ಭಟ್ಕಳದಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ಪತ್ತೆ.. - ಕೊರೊನಾ ವೈರಸ್
ವಿದೇಶದಿಂದ ಬಂದಿದ್ದ ಗೆಳೆಯನನ್ನು ಬರಮಾಡಿಕೊಳ್ಳಲು ತೆರಳಿದ್ದ ವ್ಯಕ್ತಿಗೆ ಸದ್ಯ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಸದ್ಯ 76ಕ್ಕೆ ಏರಿದೆ.
ಮಂಗಳೂರುನಿಂದ ಮಾ. 20 ರಂದು ಭಟ್ಕಳಕ್ಕೆ ಆಗಮಿಸಿದ್ದ ಸೋಂಕಿತ (ಸಂಖ್ಯೆ) 35ರ ವ್ಯಕ್ತಿ ಸ್ನೇಹಿತನಾಗಿದ್ದಾನೆ. ವಿದೇಶದಿಂದ ಬಂದ ಸೋಂಕಿತ ಗೆಳೆಯನನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದ. ಭಟ್ಕಳಕ್ಕೆ ತನ್ನ ಕಾರಿನಲ್ಲಿ ಕರೆದುಕೊಂಡು ಬಂದು ಆತನನ್ನ ಮನೆವರೆಗೂ ತೆರಳಿ ಬಿಟ್ಟು ಬಂದಿದ್ದ.
ಇದಾದ ನಂತರ ಅರ್ಧ ಗಂಟೆಯಲ್ಲೇ ಸೋಂಕಿತ ಸಂ.35 ಅನುಮಾನದ ಮೇಲೆ ಆಸ್ಪತ್ರೆಗೆ ಸೇರಿದಾಗ ಆತನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅನುಮಾನದ ಮೇಲೆ ಆತನ ಸ್ನೇಹಿತನ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ.