ಕಾರವಾರ: ಒಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ರಾಮನಗುಳಿ ಕಲ್ಲೇಶ್ವರ ತೂಗು ಸೇತುವೆಯೂ ಇಂದು ಕೊಚ್ಚಿ ಹೋಗಿದ್ದು, ಇಲ್ಲಿಯವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಮೂರು ತೂಗು ಸೇತುವೆಗಳು ನೀರುಪಾಲಾದಂತಾಗಿದೆ.
ಮಹಾ ಮಳೆಗೆ ಕೊಚ್ಚಿಹೋಯ್ತು ಮತ್ತೊಂದು ತೂಗು ಸೇತುವೆ...! - ಗಂಗಾವಳಿ ನದಿ
ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದೆ. ರಾಮನಗುಳಿ ಕಲ್ಲೇಶ್ವರ ತೂಗು ಸೇತುವೆಯೂ ಇಂದು ಕೊಚ್ಚಿ ಹೋಗಿದ್ದು, ಜಿಲ್ಲೆಯಲ್ಲಿ ಒಟ್ಟು ಮೂರು ತೂಗು ಸೇತುವೆಗಳು ನೀರುಪಾಲಾಗಿವೆ.
ಕಳೆದ 10 ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಗಂಗಾವಳಿ ನದಿ ಅಪಾಯ ಮಟ್ಟ ಹರಿಯುತ್ತಿದೆ. ಇದರಿಂದಾಗಿ ಇಲ್ಲಿನ ರಾಮನಗುಳಿ, ಕಲ್ಲೇಶ್ವರ, ಗುಳ್ಳಾಪುರ, ಹೆಗ್ಗಾರ್ ಭಾಗದ ಮನೆಗಳು ಜಲಾವೃತಗೊಂಡಿವೆ. ಈ ಭಾಗದ ಸಂಪರ್ಕಕೊಂಡಿಯಾಗಿದ್ದ ಕಳೆದ 10 ವರ್ಷಗಳ ಹಿಂದೆ ಜಿಲ್ಲೆಯಲ್ಲಿಯೇ ಮೊದಲ ಬಾರಿ ನಿರ್ಮಿಸಿದ್ದ ರಾಮನಗುಳಿ, ಕಲ್ಲೇಶ್ವರ ತೂಗು ಸೇತುವೆ ಇಂದು ಕೊಚ್ಚಿ ಹೋಗಿದೆ. ಸೇತುವೆ ಮೇಲೆ ನೀರು ಹರಿದ ಪರಿಣಾಮ ನೀರಿನ ಒತ್ತಡಕ್ಕೆ ಸೇತುವೆ ತುಂಡಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಕಲ್ಲೇಶ್ವರ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳು, ಯಲ್ಲಾಪುರ ಹಾಗೂ ಅಂಕೋಲಾ ಭಾಗಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಈ ಸೇತುವೆ ಪ್ರಸಿದ್ಧ ಪ್ರವಾಸಿ ತಾಣವೂ ಆಗಿತ್ತು. ಅಲ್ಲದೇ ಕಳೆದ ಎರಡು ದಿನಗಳ ಹಿಂದೆ ಅಂಕೋಲಾದ ಡೊಂಗ್ರಿ ಬಳಿ ನಿರ್ಮಿಸಿದ್ದ ತೂಗು ಸೇತುವೆ ಮತ್ತು ಕುಮಟಾದಲ್ಲಿ ಹರಿಯುವ ಅಘನಾಶಿನಿ ನದಿಗೆ ಮಾಸ್ತಿಮನೆ ಹಾಗೂ ಬಗಣೆ ಮೊರಸೆ ಸಂಪರ್ಕಿಸುವ ಸೇತುವೆ ಕೂಡ ಕೊಚ್ಚಿ ಹೋಗಿತ್ತು. ಜಿಲ್ಲೆಯಲ್ಲಿ ಒಟ್ಟು ಮೂರು ತೂಗು ಸೇತುವೆಗಳಿಗೆ ಹಾನಿಯಾಗಿದ್ದು, ಕುಮಟಾದಲ್ಲಿ ಕಟ್ಟಾದ ಸೇತುವೆಯಿಂದಾಗಿ ಇಂದಿಗೂ ಕೂಡ ಈ ಭಾಗದ ಜನರು ದ್ವೀಪವನ್ನು ಬಿಟ್ಟು ಬರಲಾರದ ಸ್ಥಿತಿ ನಿರ್ಮಾಣವಾಗಿದೆ.