ಕರ್ನಾಟಕ

karnataka

ETV Bharat / state

ದೋಣಿ ಮಗುಚಿ ಓರ್ವ ನಾಪತ್ತೆ, ಇಬ್ಬರ ರಕ್ಷಣೆ : ದುರಂತಕ್ಕೆ ಪ್ರೀ ವೆಡ್ಡಿಂಗ್ ಫೋಟೋಶೂಟ್ ಕಾರಣ!? - One missing and two protection in sharavati river

ಹೊನ್ನಾವರ ತಾಲೂಕಿನ ಮಾವಿನಕುರ್ವಾದಲ್ಲಿ ದೋಣಿ ಮಗುಚಿ ದುರಂತ ಸಂಭವಿಸಿದೆ. ಶರಾವತಿ ನದಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್​ ಬೋಟಿನ ಓಡಾಟದ ವೇಗಕ್ಕೆ ದೋಣಿ ಮಗುಚಿದೆ ಎನ್ನಲಾಗುತ್ತಿದೆ..

ದೋಣಿ ದುರಂತ
ದೋಣಿ ದುರಂತ

By

Published : Jun 6, 2022, 11:50 AM IST

Updated : Jun 6, 2022, 12:28 PM IST

ಕಾರವಾರ: ಶರಾವತಿ ನದಿಯಲ್ಲಿ ದೋಣಿ ಮಗುಚಿ ಓರ್ವ ನಾಪತ್ತೆಯಾಗಿದ್ದು, ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಬಳಿ ನಡೆದಿದೆ.

ದೋಣಿಯಲ್ಲಿದ್ದ ಮಾವಿನಕುರ್ವಾ ಗ್ರಾಪಂ ಸದಸ್ಯ ಪೀಟರ್ ಮೆಂಡಿಸ್ಸಾ ಹಾಗೂ ಜೆಲ್ವಿನ್ ಡಯಾಸ್ ಎಂಬುವರನ್ನು ಇದೇ ಗ್ರಾಮದ ಬೆಸ್ತಾಂವ್ ಎಂಬುವರು ರಕ್ಷಣೆ ಮಾಡಿದ್ದಾರೆ. ಪ್ರಕಾಶ್ ಫರ್ನಾಂಡಿಸ್ ಎಂಬುವರು ನದಿಯಲ್ಲಿ ಬಿದ್ದು ನಾಪತ್ತೆಯಾಗಿದ್ದಾರೆ.

ನದಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡುತ್ತಿದ್ದ​ ಬೋಟಿನ ಓಡಾಟದ ವೇಗಕ್ಕೆ ದೋಣಿ ಮಗುಚಿದೆ ಎನ್ನಲಾಗುತ್ತಿದೆ. ಸ್ಥಳೀಯರ ಸಹಕಾರದಿಂದ ಪೊಲೀಸರು ನಾಪತ್ತೆಯಾದ ಪ್ರಕಾಶ್ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ:ನದಿಯಲ್ಲಿ ದೋಣಿ ಮುಳುಗಿ 4 ಮಂದಿ ಸಾವು, ಹಲವರು ನಾಪತ್ತೆ

Last Updated : Jun 6, 2022, 12:28 PM IST

ABOUT THE AUTHOR

...view details