ಕರ್ನಾಟಕ

karnataka

ETV Bharat / state

ದಾವಣಗೆರೆ, ಹಾವೇರಿ, ಉತ್ತರ ಕನ್ನಡದಲ್ಲಿ ಕೊರೊನಾ ಅಟ್ಟಹಾಸ: ಸೋಂಕಿನಿಂದ ವೃದ್ಧೆ ಬಲಿ - ಹಾವೇರಿ ಕೊರೊನ ಸುದ್ದಿ

ರಾಜ್ಯದಲ್ಲಿ ಕೊರೊನಾ ಹಾವಳಿ ಮತ್ತೆ ವೃದ್ಧಿಸಿದ್ದು, ಗುರುವಾರ ದಾವಣಗೆರೆ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಹೊಸ ಪ್ರಕರಣಗಳು ದಾಖಲಾಗಿವೆ.

old women died by corona
ದಾವಣಗೆರೆ, ಹಾವೇರಿ, ಉತ್ತರಕನ್ನಡದಲ್ಲಿ ಕೊರೊನಾ ಅಟ್ಟಹಾಸ : ಸೋಂಕಿನಿಂದ ವೃದ್ಧೆ ಬಲಿ

By

Published : Oct 15, 2020, 8:46 PM IST

ದಾವಣಗೆರೆ/ ಹಾವೇರಿ/ಕಾರವಾರ: ರಾಜ್ಯದಲ್ಲಿ ಕೊರೊನಾ ಹಾವಳಿ ಮತ್ತೆ ವೃದ್ಧಿಸಿದ್ದು, ಗುರುವಾರ ದಾವಣಗೆರೆ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಾದ್ಯಂತ ಹೊಸ ಪ್ರಕರಣಗಳು ದಾಖಲಾಗಿವೆ.

ದಾವಣಗೆರೆ ಜಿಲ್ಲೆಯಲ್ಲಿ 103 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿದ್ದರೇ 165 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಇದುವರೆಗೆ 17,349 ಜನರು ಡಿಸ್ಚಾರ್ಜ್ ಆಗಿದ್ದಾರೆ.

ಕೆಟಿಜೆ ನಗರದ 60 ವರ್ಷದ ವೃದ್ಧೆ ಮೃತಪಟ್ಟಿದ್ದು, ಇದುವರೆಗೆ 250 ಮಂದಿ ಬಲಿಯಾಗಿದ್ದಾರೆ. ದಾವಣಗೆರೆಯಲ್ಲಿ 103 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 18,859ಕ್ಕೇರಿದೆ.

ದಾವಣಗೆರೆ 47, ಹರಿಹರ 18, ಜಗಳೂರು 4, ಚನ್ನಗಿರಿ 13, ಹೊನ್ನಾಳಿ 19 ಹಾಗೂ ಹೊರ‌ ಜಿಲ್ಲೆಯಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಇರುವುದು ಖಚಿತವಾಗಿದೆ‌. ಪ್ರಸ್ತುತ 1,260 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ. 447 ಜನರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇನ್ನು 7,203 ಸ್ವ್ಯಾಬ್​ಗಳ ರಿಪೋರ್ಟ್ ಗೆ ಜಿಲ್ಲಾಡಳಿತ ಕಾಯುತ್ತಿದೆ.

ಹಾವೇರಿಯಲ್ಲಿ 42 ಜನರಿಗೆ ಕೊರೊನಾ

ಹಾವೇರಿ ಜಿಲ್ಲೆಯಲ್ಲಿ ಗುರುವಾರ 42 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 9928ಕ್ಕೆ ಏರಿದೆ. ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಗುರುವಾರ 74 ಜನರು ಗುಣಮುಖರಾಗಿದ್ದಾರೆ.

ಬ್ಯಾಡಗಿ ತಾಲೂಕಿನಲ್ಲಿ 09, ಹಾನಗಲ್ ತಾಲೂಕಿನಲ್ಲಿ 05, ಹಾವೇರಿ ತಾಲೂಕಿನಲ್ಲಿ 08 ಪ್ರಕರಣಗಳು ವರದಿಯಾಗಿವೆ. ಹಿರೇಕೆರೂರು ತಾಲೂಕು 01,ರಾಣೆಬೆನ್ನೂರು ತಾಲೂಕಿನಲ್ಲಿ 14, ಸವಣೂರು ತಾಲೂಕಿನಲ್ಲಿ 03 ಮತ್ತು ಶಿಗ್ಗಾವಿ ತಾಲೂಕಿನಲ್ಲಿ ಇಬ್ಬರಿಗೆ ಕೊರೊನಾ ತಗುಲಿದೆ. ಜಿಲ್ಲೆಯಲ್ಲಿ 429 ಜನ ಹೋಂಐಸೋಲೇಷನಲ್ಲಿದ್ದು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 163 ಸೋಂಕಿತರು ಚಿಕಿತ್ಸೆ

ಉತ್ತರ ಕನ್ನಡ ಜಿಲ್ಲೆಯಲ್ಲಿ 72 ಮಂದಿಗೆ ಕೊರೊನಾ

ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 72 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 11,705ಕ್ಕೆ ಏರಿಕೆಯಾಗಿದೆ.

ಕಾರವಾರದಲ್ಲಿ 12, ಅಂಕೋಲಾ 4, ಕುಮಟಾದಲ್ಲಿ 8, ಹೊನ್ನಾವರ 10, ಭಟ್ಕಳ 4, ಶಿರಸಿ 3, ಸಿದ್ದಾಪುರ 5, ಯಲ್ಲಾಪುರ 2, ಮುಂಡಗೋಡದಲ್ಲಿ 24 ಮಂದಿಗೆ ಸೋಂಕು ದೃಢಪಟ್ಟಿದೆ. ಇನ್ನು, ಕಾರವಾರದಲ್ಲಿ 10, ಅಂಕೋಲಾದಲ್ಲಿ 8, ಕುಮಟಾದಲ್ಲಿ 27, ಹೊನ್ನಾವರದಲ್ಲಿ 7, ಭಟ್ಕಳದಲ್ಲಿ 1, ಶಿರಸಿಯಲ್ಲಿ 12, ಸಿದ್ದಾಪುರದಲ್ಲಿ 2, ಯಲ್ಲಾಪುರದಲ್ಲಿ 1, ಮುಂಡಗೋಡದಲ್ಲಿ 28, ಜೊಯಿಡಾದಲ್ಲಿ ಓರ್ವ ಹಾಗೂ ಹಳಿಯಾಳದಲ್ಲಿ ಐವರು, ಒಟ್ಟು 102 ಸೋಂಕಿತರು ಗುಣಮುಖರಾಗಿದ್ದಾರೆ. ಕುಮಟಾದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

623 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಇದ್ದರೆ, 646 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 1,269 ಸಕ್ರಿಯ ಪ್ರಕರಣಗಳು ಸದ್ಯ ಜಿಲ್ಲೆಯಲ್ಲಿದ್ದು, ಒಟ್ಟು 149 ಮಂದಿ ಮೃತಪಟ್ಟಿದ್ದಾರೆ.

ABOUT THE AUTHOR

...view details