ಕಾರವಾರ:ಆತ 57 ವರ್ಷದ ವೃದ್ಧ. ಅಭಿವೃದ್ಧಿ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮ, ನೀರಿನ ಅಭಾವ ಕಂಡು ಮನನೊಂದಿದ್ದು, ಇದಕ್ಕಾಗಿ ತಾನು ಏನಾದರೂ ಮಾಡಬೇಕು ಎಂದು ನಿರ್ಧರಿಸಿದ್ದ. ಈ ನಿಟ್ಟಿನಲ್ಲಿ ರಾಜ್ಯದಿಂದ ರಾಜ್ಯಕ್ಕೆ ಸಂಚರಿಸುವ ಮೂಲಕ ಆ ವೃದ್ಧ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾನೆ. ದೇಶ ಸುತ್ತುವರೆಯುವ ಗುರಿ ಹೊಂದಿರುವ ಆ ವೃದ್ಧ ಜಾಗೃತಿ ಮೂಡಿಸುತ್ತಿರುವುದಾದರೂ ಹೇಗೆ ಅಂತೀರಾ? ಇಲ್ಲಿದೆ ನೋಡಿ..
ಒಂದೆಡೆ ಬಿಸಿಲಿನಲ್ಲಿ ಏಕಾಂಗಿಯಾಗಿ ಸೈಕಲ್ ತುಳಿಯುತ್ತಾ, ರಸ್ತೆಯಲ್ಲಿ ಸಿಕ್ಕ ಜನರೊಂದಿಗೆ ಮಾತನಾಡುತ್ತಾ ಜಾಗೃತಿ ಮೂಡಿಸುತ್ತಿರುವ ವೃದ್ಧ. ಮತ್ತೊಂದೆಡೆ ಸೈಕಲ್ ಮೇಲೆ ಬಂದಿರುವ ವೃದ್ಧನನ್ನ ಕುತೂಹಲದಿಂದ ವೀಕ್ಷಿಸುತ್ತಿರುವ ಸಾರ್ವಜನಿಕರು. ಈ ದೃಶ್ಯಗಳು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ.
ಯಾರು ಈ ವೃದ್ಧ?:
ಹೀಗೆ ಸೈಕಲ್ ತುಳಿದುಕೊಂಡು ನಗರಕ್ಕೆ ಆಗಮಿಸಿರುವ ವ್ಯಕ್ತಿಯ ಹೆಸರು ಪೊರಿಮಲಿ ಕಾಂಜಿ. ಪಶ್ಚಿಮ ಬಂಗಾಳ ಮೂಲದವರು. 57 ವರ್ಷದ ಪೊರಿಮಲಿ ಕಾಂಜಿ 'ಮರಗಳನ್ನ ಉಳಿಸಿ, ನೀರನ್ನ ಸಂರಕ್ಷಿಸಿ' ಎನ್ನುವ ಘೋಷ ವಾಕ್ಯದೊಂದಿಗೆ ಸೈಕಲ್ ಯಾತ್ರೆ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
ಜ.1ರಿಂದ ಸೈಕಲ್ ಯಾತ್ರೆ:
ಪೊರಿಮಲಿ ಕಾಂಜಿ 2021ರ ಜ.1ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಿಂದ ಸೈಕಲ್ ಯಾತ್ರೆಯನ್ನ ಆರಂಭಿಸಿದ್ದು, ಅಲ್ಲಿಂದ ಹೆದ್ದಾರಿ ಮಾರ್ಗವಾಗಿ ಕರಾವಳಿಯಾದ್ಯಂತ ಪ್ರಯಾಣಿಸುತ್ತಾ ಬಂದಿದ್ದಾರೆ. ದಿನಕ್ಕೆ 120 ಕಿಲೋ ಮೀಟರ್‌ನಂತೆ ಇದುವರೆಗೆ ಸುಮಾರು 5000 ಕಿಲೋ ಮೀಟರ್‌ಗಳನ್ನ ಸೈಕಲ್ ಮೇಲೆಯೇ ಕ್ರಮಿಸಿದ್ದು ಮಾರ್ಗಮದ್ಯೆ ಸಿಗುವ ಜನರಿಗೆ ಪರಿಸರ ರಕ್ಷಣೆ ಹಾಗೂ ನೀರನ್ನ ಉಳಿಸುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಜಾಗೃತಿಯ ಉದ್ದೇಶ: