ಶಿರಸಿ: ಮದ್ಯಪಾನ ತ್ಯಜಿಸುವಂತೆ ಬುದ್ಧಿ ಮಾತನ್ನು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ವೃದ್ಧನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹತ್ತರಗಿಯಲ್ಲಿ ನಡೆದಿದೆ.
ಕುಡಿಬೇಡ ಅಂತಾ ಪತ್ನಿ ಬುದ್ಧಿ ಮಾತು ಹೇಳಿದ್ರೆ ವೃದ್ಧ ಹೀಗ್ ಮಾಡ್ಕೊಳ್ಳೋದಾ! - ನೇಣು ಬಿಗಿದು ವೃದ್ಧ ಆತ್ಮಹತ್ಯೆಗೆ ಶರಣು
ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ನೊಂದು ವೃದ್ಧನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕುಡಿಬೇಡ ಅಂತಾ ಬುದ್ಧಿ ಮಾತು ಹೇಳಿದ್ರೆ ಹೀಗ್ ಮಾಡ್ಕೊಳ್ಳೋದಾ...?
ಹತ್ತರಗಿಯ ಕರಿಯಾ ಚಲುವಾದಿ (65) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ವೃದ್ಧ. ಈತನಿಗೆ ಹಲವು ವರ್ಷಗಳಿಂದ ಕುಡಿತದ ಚಟವಿತ್ತು. ಕುಡಿದು ಹೆಂಡತಿ ಮಕ್ಕಳೊಂದಿಗೆ ಸದಾ ಜಗಳವಾಡುತ್ತಿದ್ದ. ಇದರಿಂದ ಬೇಸತ್ತ ಹೆಂಡತಿ ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ನೊಂದು ಮನೆಯ ಹಿಂಬದಿಯ ಮರಕ್ಕೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ.
ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.