ಶಿರಸಿ:ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದ ಘಟನೆ ಶಿರಸಿ ನಗರದ ಚಿಲಮೆ ಕೆರೆ ಬಳಿ ಇರುವ ಬಾರ್ ಒಂದರಲ್ಲಿ ನಡೆದಿದೆ. ಶಿರಸಿಯ ಗಣೇಶ ನಗರದ ಸಂದೀಪ ನಾಯ್ಕ ಚಾಕು ಇರಿತಕ್ಕೆ ಒಳಗಾದ ಯುವಕ.
ಹಳೆ ದ್ವೇಷದ ಹಿನ್ನೆಲೆ: ಶಿರಸಿಯಲ್ಲಿ ಯುವಕನಿಗೆ ಚಾಕು ಇರಿತ - sirsi crime new
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹಳೆ ದ್ವೇಷದ ಹಿನ್ನಲೆಯಲ್ಲಿ ಇಬ್ಬರ ನಡುವೆ ಜಗಳ ನಡೆದು ಓರ್ವನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಚಾಕುವಿನಿಂದ ಇರಿದ ಆರೋಪಿ ಅಶ್ರಫ್ ಸಹ ಇದೇ ಏರಿಯಾದವನಾಗಿದ್ದು, ಹಳೆ ದ್ವೇಷದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಘಟನೆ ಜರುಗಿದ ತಕ್ಷಣ ಸಂತ್ರಸ್ತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಚಿಲಮೆ ಕೆರೆ ಬಳಿ ಇರುವ ಬಾರ್ ಒಂದರಲ್ಲಿ ಈ ಇಬ್ಬರು ಕುಡಿದಿದ್ದಾರೆ. ಅಲ್ಲಿ ಆರೋಪಿ ಅಶ್ರಫ್ ಗಲಾಟೆ ಮಾಡುತ್ತಿದ್ದಾಗ ಸಂದೀಪ್, ಸುಮ್ಮನೆ ಕುಡಿದು ಹೋಗುವಂತೆ ಎಚ್ಚರಿಕೆ ನೀಡಿದ್ದಾನೆ. ಇದನ್ನೆ ನೆಪವಾಗಿಸಿಕೊಂಡು ಅಶ್ರಫ್ ಹಳೆ ಘಟನೆಯನ್ನೂ ನೆನಪಿಸಿ ತನ್ನ ಇಬ್ಬರು ಗೆಳೆಯರೊಂದಿಗೆ ಸೇರಿ ದಾಳಿ ನಡೆಸಿದ್ದಾಗಿ ತಿಳಿದು ಬಂದಿದೆ.