ಭಟ್ಕಳ: ಖಚಿತ ಮಾಹಿತಿ ಮೇರೆಗೆ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ದಾಳಿ ನಡೆಸಿ ಬಾಲ್ಯ ವಿವಾಹವನ್ನು ತಡೆದ ಘಟನೆ ಯಲ್ವಡಿಕವೂರ ಪಂಚಾಯತ್ ವ್ಯಾಪ್ತಿಯ ಪುರವರ್ಗದಲ್ಲಿಯಲ್ಲಿ ನಡೆದಿದೆ.
ಭಟ್ಕಳ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು
24 ವರ್ಷದ ಯುವಕನ ಜೊತೆ ಅಪ್ರಾಪ್ತೆಯನ್ನು ಮದುವೆ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ, ಬಾಲಕಿಯ ಪೋಷಕರಿಗೆ ತಿಳಿ ಹೇಳಿ ಬಾಲ್ಯ ವಿವಾಹ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನಾಳೆ, 24 ವರ್ಷದ ಯುವಕನ ಜೊತೆ ಅಪ್ರಾಪ್ತೆಯನ್ನು ಮದುವೆ ಮಾಡಲು ತಯಾರಿ ನಡೆಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಪಡೆದ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಗಂಗಾ ಗೌಡ, ಕುಸುಮಾ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಶೀಲಾ ಮೊಗೇರ, ಶಾರದಾ, ನಗರ ಠಾಣೆಯ ಪಿಎಸ್‍ಐ ಕುಡಗಂಟಿ ಸ್ಥಳಕ್ಕೆ ತೆರಳಿ ಬಾಲಕಿಯ ಪೋಷಕರಿಗೆ ಬುದ್ಧಿ ಹೇಳಿದ್ದಾರೆ. ಬಾಲಕಿಯ ವಯಸ್ಸು ಇನ್ನೂ16 ದಾಟಿಲ್ಲ, ಕಾನೂನಿನ ಪ್ರಕಾರ 18 ವರ್ಷ ತುಂಬುವ ಮೊದಲೇ ವಿವಾಹ ಮಾಡಿದರೆ ಅಪರಾಧವಾಗುತ್ತದೆ ಎಂದು ತಿಳಿ ಹೇಳಿದ್ದಾರೆ.
ನಮಗೆ ಬಾಲ್ಯವಿವಾಹದ ಕುರಿತು ಅರಿವು ಇಲ್ಲದೆ ಈ ವಿವಾಹಕ್ಕೆ ಮುಂದಾಗಿದ್ದೇವು. ಬಾಲಕಿಗೆ 18 ತುಂಬುವ ವರೆಗೂ ವಿವಾಹ ಮಾಡುವುದಿಲ್ಲ ಎಂದು ಬಾಲಕಿಯ ತಾಯಿ ಪೊಲೀಸರಿಗೆ ಮತ್ತು ಅಧಿಕಾರಿಗಳಿಗೆ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ.